ಜ್ಞಾನ ಮಾರ್ಗದ ಮೂರು ದಿನಗಳ ಕಾರ್ಯಕ್ರಮ

ज्ञानमार्ग से
Jump to navigation Jump to search

ಈ ವಿಧಾನ ಜ್ಞಾನ ಮಾರ್ಗದ ಸಂಕ್ಷಿಪ್ತ ಪರಿಚಯವಾಗಿದೆ. ಇದು ಮೂರು ಮುಖ್ಯ ಬೋಧನೆಗಳನ್ನು ನೀಡುತ್ತದೆ - ಸ್ವಯಂ, ಭ್ರಮೆ ಮತ್ತು ಅದ್ವೈತ.

ಈ ಕೋರ್ಸ್ ಅನ್ನು ಶಿಕ್ಷಕರಿಂದ ವಿದ್ಯಾರ್ಥಿಗೆ ಮೌಖಿಕವಾಗಿ ನೀಡಲಾಗುತ್ತದೆ. ಈ ಕ್ರಮವು ಉಪನ್ಯಾಸವಲ್ಲ, ಇದು ಸಂಭಾಷಣೆಯಾಗಿದೆ. ವಿದ್ಯಾರ್ಥಿಯ ತಿಳುವಳಿಕೆಯನ್ನು ಅವಲಂಬಿಸಿ, ನಿಜವಾದ ಸಂಭಾಷಣೆಯು ಸ್ವಲ್ಪ ವಿಭಿನ್ನವಾಗಿ ಸಂಭವಿಸಬಹುದು,ಕೆಳಗಿನ ಪಠ್ಯವು ಕೇವಲ ಮಾರ್ಗದರ್ಶಿಯಾಗಿದೆ.

ಪ್ರತಿ ದಿನವೂ ಒಂದು ವಿಷಯವನ್ನು ಚರ್ಚಿಸಲಾಗುತ್ತದೆ, ಇದು ಸುಮಾರು 45 ರಿಂದ 60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಅರ್ಹ ಶಿಕ್ಷಕರು ಅಥವಾ ಜ್ಞಾನದ ಹಾದಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿ (ಅಥವಾ ಕಾರ್ಯಕ್ರಮದ #7 ಹಂತದಲ್ಲಿರುವವರು ಸಹ) ಈ ವಿಧಾನವನ್ನು ಕಲಿಸಲು ಅರ್ಹರಾಗಿರುತ್ತಾರೆ.

ಮುನ್ನೆಚ್ಚರಿಕೆಗಳು

ಇಚ್ಛೆ ಮತ್ತು ಆಸಕ್ತಿ ಇರುವವರಿಗೆ ಮಾತ್ರ ಕಲಿಸಬೇಕು. ವಿಶೇಷವಾಗಿ ಜ್ಞಾನದ ಅನ್ವೇಷಕರು ಅಥವಾ ಆಧ್ಯಾತ್ಮಿಕ ಹಾದಿಯಲ್ಲಿರುವ ಜನರು. ಸಾಮಾನ್ಯ ಜನರು ಅಥವಾ ಅಸಮರ್ಪಕ ಬುದ್ಧಿವಂತಿಕೆ ಹೊಂದಿರುವ ಜನರು ಈ ಬೋಧನೆಯನ್ನು ಸ್ವೀಕರಿಸಬಾರದು. ಅದ್ಭುತ ಮತ್ತು ಕುತೂಹಲಕಾರಿ ಮಕ್ಕಳನ್ನೂ ಸಹ ಕಲಿಸಬಹುದು.

ಯಾವುದೇ ಸಂದರ್ಭದಲ್ಲೂ ಈ ಜ್ಞಾನವನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಅನರ್ಹರು ಅಥವಾ ಉಗ್ರಗಾಮಿಗಳು ಅಥವಾ ಮುಚ್ಚಿದ ಮನಸ್ಸಿನವರಿಗೆ ನೀಡಲಾಗುವುದಿಲ್ಲ.

ಈ ಬೋಧನೆಯನ್ನು ನೀಡುವ ವ್ಯಕ್ತಿಯು ಯಾವುದೇ ಅನಿರೀಕ್ಷಿತ ಪರಿಣಾಮಗಳಿಗೆ ಜವಾಬ್ದಾರನಾಗಿರುತ್ತಾನೆ.

ಈ ಬೋಧನೆಗೆ ಪ್ರತಿಯಾಗಿ ಹಣವನ್ನು ನಿಗದಿ ಮಾಡಬಾರದು ಮತ್ತು ಏನನ್ನೂ ಕೇಳಬಾರದು. ಇದನ್ನು ಸಂಪೂರ್ಣವಾಗಿ ಉಚಿತವಾಗಿ ಸೇವೆಯಾಗಿ ನೀಡಬೇಕು. ಪರಿಚಯ: ಜ್ಞಾನದ ಮಾರ್ಗ ಜ್ಞಾನದ ಮಾರ್ಗವು ಆಧ್ಯಾತ್ಮಿಕ ಮಾರ್ಗವಾಗಿದೆ, ಅದು ಜ್ಞಾನದ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಈ ಮಾರ್ಗದಲ್ಲಿ ನಾವು ಅಜ್ಞಾನವನ್ನು ನಾಶಪಡಿಸುತ್ತೇವೆ. ಎಲ್ಲಾ ರೀತಿಯ ಅಜ್ಞಾನವು ಬಂಧನ ಮತ್ತು ಸಂಕಟಕ್ಕೆ( ದುಖ) ಮೂಲ ಕಾರಣವೆಂದು ತಿಳಿದುಕೊಂಡು, ನಾವು ಸರಿಯಾದ ತರಬೇತಿಯ ಮೂಲಕ ಮತ್ತು ಅನುಭವಿ ಶಿಕ್ಷಕರ ಅಡಿಯಲ್ಲಿ ಅದನ್ನು ತೊಡೆದುಹಾಕಲು ಪ್ರಯತ್ನಿಸುತ್ತೇವೆ. ಇದು ಜೀವನಶೈಲಿ; ನಾವು ಜ್ಞಾನದಲ್ಲಿ ವಾಸಿಸುತ್ತೇವೆ. ಇದು ನೇರ ಮತ್ತು ಅಂತಿಮ ಮಾರ್ಗವಾಗಿದೆ.

ಜ್ಞಾನದ ಸಾಧನಗಳು ಜ್ಞಾನವನ್ನು ಪಡೆಯುವುದು ಹೇಗೆ? ಕೇವಲ ಎರಡು ವಿಧಾನಗಳಿವೆ:

  • ನೇರ ಅನುಭವ
  • ತರ್ಕದಿಂದ

ಜ್ಞಾನದ ಹಾದಿಯ ಫಲಗಳು--

  • ಆತ್ಮಸಾಕ್ಷಾತ್ಕಾರ
  • ಏಕತೆಯ ಸಾಕ್ಷಾತ್ಕಾರ
  • ಅನುಭವಗಳೆಲ್ಲವೂ ಭ್ರಮೆ ಎಂಬ ಅರಿವು
  • ದುಃಖದ ಅಂತ್ಯ
  • ಸಂಪೂರ್ಣ ಸ್ವಾತಂತ್ರ್ಯ
  • ವಿಮೋಚನೆ( ಮೋಕ್ಷ)
  • ಸಂಪೂರ್ಣ ಆನಂದ
  • ವೇಗವಾದ ಆಧ್ಯಾತ್ಮಿಕ ವಿಕಾಸ
  • ಮತ್ತು ಇನ್ನೂ ಅನೇಕ ...
  • ಜ್ಞಾನದ ವಿಧಗಳು

ಜ್ಞಾನದಲ್ಲಿ ಮೂರು ವಿಧಗಳಿವೆ:-

ಸ್ವಯಂ(ಆತ್ಮ) ಜ್ಞಾನ-- ನಾನು ಯಾರು?

ಪ್ರಪಂಚದ ಜ್ಞಾನ-- ಇದು(ಕಾಣುವುದೇಲ್ಲ) ನಿಜವೇ?

ಏಕತೆಯ ಜ್ಞಾನ-- ಎಲ್ಲವೂ ಹೇಗೆ ಒಂದೇ?

ದಿನ 1: ಸ್ವಯಂ(ಆತ್ಮ) ಜ್ಞಾನ--

ನಾನು ಯಾರು ಮತ್ತು ನನ್ನ ಸ್ವರೂಪ (ಸಾರ) ಏನು ಎಂದು ಕಂಡುಹಿಡಿಯಲು ಪ್ರಯತ್ನಿಸೋಣ? ನಾವು ಇದನ್ನು ಹೇಗೆ ಮಾಡಬಹುದು? ನೇರ ಅನುಭವ ಮತ್ತು ತರ್ಕದ ಮೂಲಕ ನಮಗೆ ತಿಳಿದಿರುವ ಯಾವುದನ್ನಾದರೂ ನಾವು ಅನ್ವೇಷಿಸಬಹುದು ಮತ್ತು ನಂತರ ಅದು ನಾನೇ ಅಥವಾ ಅಲ್ಲವೇ ಎಂಬುದನ್ನು ನಾವು ಪರಿಶೀಲಿಸಬಹುದು.

ಕೆಳಗಿನ ಪ್ರಶ್ನೆಗಳನ್ನು ಒಂದೊಂದಾಗಿ ಕೇಳಿಕೊಳ್ಳಿ ಮತ್ತು ಪ್ರತಿಯೊಂದಕ್ಕೂ ಉತ್ತರಿಸಿದ ನಂತರ, ಮುಂದಿನ ಪ್ರಶ್ನೆಯನ್ನು ಕೇಳಿ.

ವಸ್ತುಗಳು

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ 'ವಸ್ತುಗಳೊಂದಿಗೆ ನನ್ನ ಸಂಬಂಧ.

ನಾನು ಈಗ ಎಲ್ಲಿದ್ದೇನೆ?

ನನ್ನ ಮುಂದೆ ಏನಿದೆ?

ನಾನು ವಸ್ತುವನ್ನು ನೋಡುತ್ತಿದ್ದೇನೆಯೇ ಅಥವಾ ವಸ್ತುವು ನನ್ನನ್ನು ನೋಡುತ್ತಿದೆಯೇ?

ಯಾವುದೇ ಅನುಮಾನವಿದೆಯೇ?

ನಾನು ವಸ್ತುವಲ್ಲ ಎಂದು ಹೇಳಬಹುದೇ? ನಾನು ಅದನ್ನು ನೋಡುತ್ತಿದ್ದೇನೆ ಆದರೆ ಅದು ನನ್ನತ್ತ ನೋಡುತ್ತಿಲ್ಲ ಅಲ್ಲವೇ?

ಹೌದು ಎಂದಾದರೆ ಆ ವಸ್ತು ನಾನಾಗಿರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹಾಗಾಗಿ ನನ್ನ ನೇರ ಅನುಭವದ ಮೂಲಕ ನಾನು ನೋಡಬಹುದಾದ ಯಾವುದೂ ನಾನಲ್ಲ ಎಂದು ಹೇಳಬಹುದು. ಹಾಗೆಯೇ ಕೇಳವಿಕೆ, ಅಥವಾ ಸ್ಪರ್ಶ ಅಥವಾ ಯೋಚನೆಗಳು ಇವೆಲ್ಲವನ್ನೂ ಅನುಭವಗಳು ಎಂದು ಕರೆಯಬಹುದು.


ಈಗ ನಾವು ನೋಡುತ್ತಿರುವ ವಸ್ತುವನ್ನು ಬೇರೆ ವಸ್ತುವಿಗೆ ಬದಲಾಯಿಸಿದರೆ, ನೀವು ಏನು ಹೇಳುತ್ತೀರಿ?

ವಸ್ತು ಬದಲಾಯಿತು ಎಂದು ನೀವು ಹೇಳುತ್ತೀರಾ ಅಥವಾ ನಾನು ಬದಲಾದೆ ಎಂದು ಹೇಳುತ್ತೀರಾ?

ವಸ್ತು ಬದಲಾದರೂ ನಾನು ಬದಲಾಗಿಲ್ಲ ಎಂದಾದರೆ ನನ್ನ ನೇರ ಅನುಭವದ ಮೂಲಕ ಬದಲಾಗುತ್ತಿರುವದು ನಾನಲ್ಲ ಎಂದು ಹೇಳಬಹುದು.

ವಸ್ತುಗಳು ಬದಲಾಗುತ್ತವೆ,ಆದರೆ ನಾನು ಹಾಗೆಯೇ ಇರುತ್ತೇನೆ.

ಆದ್ದರಿಂದ ನಾವು ಎರಡು ಪ್ರಮುಖ ನಿಯಮಗಳಿಗೆ ಬರುತ್ತೇವೆ:

ನಾನು ಅದನ್ನು ಅನುಭವಿಸಲು ಸಾಧ್ಯವಾದರೆ ಅದು ನಾನಲ್ಲ. ಯಾವುದು ಬದಲಾಗುತ್ತದೋ ಅದು ನಾನಲ್ಲ. ಈ ಎರಡು ನಿಯಮಗಳ ಬಗ್ಗೆ ಏನಾದರೂ ಸಂದೇಹವಿದೆಯೇ? ಈ ಎರಡು ನಿಯಮಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಬಹಳ ಮುಖ್ಯ.

ಅದು ನಾನಲ್ಲ ಎಂದು ಹೇಳಲು ಈಗ ನಾವು ಎಲ್ಲವನ್ನೂ ಪರಿಶೀಲಿಸುವ ಅಗತ್ಯವಿಲ್ಲ. ನಾನು ಇಲ್ಲಿ ತರ್ಕವನ್ನು ಬಳಸಬಹುದು. ಯಾವ ವಸ್ತುವೂ ನಾನಲ್ಲ. ನಾನು ನೋಡಬಹುದಾದ ಅಥವಾ ಬದಲಾಯಿಸಬಹುದಾದ ಯಾವುದೂ ನಾನಲ್ಲ. ಪರಿಣಾಮ: ಜಗತ್ತಿನ ಯಾವ ವಸ್ತುವೂ ನಾನಲ್ಲ. "ನಾನು" ವಸ್ತುಗಳಲ್ಲಿ ಕಂಡುಬರುವುದಿಲ್ಲ.

ದೇಹ

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ "ದೇಹದೊಂದಿಗೆ" ನನ್ನ ಸಂಬಂಧ:

ಈಗ ನಾವು ದೇಹವನ್ನು ನೋಡೋಣ ಮತ್ತು ಎರಡು ನಿಯಮಗಳನ್ನು ಬಳಸಿಕೊಂಡು ನಮ್ಮ ಅನುಭವ ಮತ್ತು ತರ್ಕವನ್ನು ಬಳಸೋಣ.

ನೀವು ದೇಹವನ್ನು ನೋಡುತ್ತಿದ್ದೀರಾ ಅಥವಾ ದೇಹವು ನಿಮ್ಮನ್ನು ನೋಡುತ್ತಿದೆಯೇ?

ನಿಯಮವನ್ನು ಬಳಸುವುದು:-- ನಾನು ಅದನ್ನು ಅನುಭವಿಸಲು ಸಾಧ್ಯವಾದರೆ ಅದು ನಾನಲ್ಲ. ಬದಲಾಗುತ್ತಿದ್ದರೆ ಅದು ನಾನಲ್ಲ. ದೇಹ ನಾನಲ್ಲ. ದೇಹದ ಯಾವ ಭಾಗವೂ ನಾನಲ್ಲ ಏಕೆಂದರೆ ಎಲ್ಲವೂ ಬದಲಾಗುತ್ತಿದೆ. ಅದೇ ತರ್ಕವು ದೇಹದ ಯಾವುದೇ ಭಾಗಕ್ಕೆ ಅನ್ವಯಿಸುತ್ತದೆ.

ಪರಿಣಾಮ: ದೇಹದ ಯಾವ ಅಂಗವೂ ನಾನಲ್ಲ ಅಥವಾ ನಾನು ಈ ದೇಹವಲ್ಲ.

ನಾನು ಕನ್ನಡಿಯಲ್ಲಿ ನೋಡುವ ಬದಲು ನಾನು ಅನುಭವಿಸುವ ದೇಹವನ್ನು ಈಗ ನೋಡೋಣ: ನೋವು, ಹಸಿವು, ನಿದ್ರೆ, ಸುಸ್ತು ಇತ್ಯಾದಿ. ಇವು ದೇಹದ ಸಂವೇದನೆಗಳು.

ನೋವನ್ನು ತೆಗೆದುಕೊಳ್ಳೋಣ. ನೀವು ನೋವನ್ನು ಅನುಭವಿಸುತ್ತಿದ್ದೀರಾ ಅಥವಾ ನೋವು ನಿಮ್ಮನ್ನು ಅನುಭವಿಸುತ್ತಿದೆಯೇ?

ನೋವು ಬಂದು ಹೋಗುತ್ತದೆಯೇ? ಇದು ಬದಲಾಗುತ್ತದೆಯೇ?

ಎರಡು ನಿಯಮಗಳನ್ನು ಬಳಸಿ ಮತ್ತು ನನಗೆ ನೋವು ಇದೆಯೇ ಎಂದು ಪರಿಶೀಲಿಸಿ.

ಪ್ರತ್ಯಕ್ಷ ಅನುಭವವನ್ನು ಬಳಸಿಕೊಂಡು ನೋವು ನಾನಲ್ಲ ಎಂದು ಉತ್ತರ ನೀಡಿದರೆ, ತರ್ಕವನ್ನು ಬಳಸಿಕೊಂಡು ನಾನು ಹೇಳಬಲ್ಲೆ- ದೇಹದಲ್ಲಿನ ಯಾವುದೇ ಸಂವೇದನೆಗಳು ನನ್ನದಲ್ಲ.

ಪರಿಣಾಮ: ನಾನು ಸಂವೇದನೆಗಳಲ್ಲ. ಯಾವ ಸಂವೇದನೆಯೂ ನನ್ನದಲ್ಲ.

ಭಾವನೆಗಳು

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ 'ಭಾವನೆಗಳೊಂದಿಗೆ' ನನ್ನ ಸಂಬಂಧ:--

ನನ್ನ ಭಾವನೆಗಳನ್ನು ನೋಡೋಣ: ಕೋಪ, ಭಯ, ಸಂತೋಷ, ಸಂಕಟ.

ನಾನು ಕೋಪಗೊಂಡಾಗ, ಕೋಪವು ನನ್ನನ್ನು ಅನುಭವಿಸುತ್ತಿದೆಯೇ ಅಥವಾ ನಾನು ಕೋಪವನ್ನು ಅನುಭವಿಸುತ್ತಿದ್ದೇನೆಯೇ?

ಕೋಪ ಬಂದು ಹೋಗುತ್ತದೆಯೇ?

ಎರಡು ನಿಯಮಗಳನ್ನು ಬಳಸಿ ಮತ್ತು ಕೋಪ ನನ್ನದೇ ಎಂದು ಪರಿಶೀಲಿಸಿ.

ನೇರ ಅನುಭವವನ್ನು ಬಳಸಿಕೊಂಡು ಕೋಪವು ನಾನಲ್ಲ ಎಂದು ಉತ್ತರವಾದರೆ, ತರ್ಕವನ್ನು ಬಳಸಿ ನಾನು ಹೇಳಬಲ್ಲೆ- ಯಾವುದೇ ಭಾವನೆಗಳು ನನ್ನದಲ್ಲ.

ಪರಿಣಾಮ: ನಾನು ಭಾವನೆಗಳಲ್ಲ. ಯಾವ ಭಾವನೆಗಳೂ ನನ್ನದಲ್ಲ.

ಆಲೋಚನೆಗಳು:--

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ 'ಆಲೋಚನೆಗಳೊಂದಿಗೆ ' ನನ್ನ ಸಂಬಂಧ:-

ನಾನು ಆಲೋಚನೆಗಳನ್ನು ಅನುಭವಿಸುತ್ತೇನೆಯೇ ಅಥವಾ ಈ ಆಲೋಚನೆಗಳು ನನ್ನನ್ನು ಅನುಭವಿಸುತ್ತವೆಯೇ?

"ನಾನು ಇದು ಅಥವಾ ಅದು" ಎಂಬಂತಹ ಆಲೋಚನೆಯೂ ಒಂದು ಆಲೋಚನೆಯೇ ಅಲ್ಲವೇ? (ಈ ನಿರ್ದಿಷ್ಟ ಆಲೋಚನೆಯು ಅಹಂಕಾರ ಚಿಂತನೆಯಾಗಿದೆ, ಅದು ಯಾವುದನ್ನಾದರೂ ನಾನು ಎಂದು ಘೋಷಿಸುತ್ತದೆ). ಇದನ್ನು(ನಾನು,ನನ್ನದು) ವಿವಿಧ ಅನುಭವಗಳೊಂದಿಗೆ ಸಂಯೋಜಿಸುತ್ತದೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ.

ಆಲೋಚನೆಗಳು ಬಂದು ಹೋಗುತ್ತವೆಯೇ? ಅವರು ಬದಲಾಗುತ್ತಿವೆಯೇ?

ಎರಡು ನಿಯಮಗಳನ್ನು ಬಳಸಿ ಮತ್ತು ಆಲೋಚನೆಯು ನನ್ನದೇ ಎಂದು ಪರಿಶೀಲಿಸಿ. ತರ್ಕದಿಂದ ನಾನು ಇದು ಅಥವಾ ನಾನು ಅದು ಎಂದು ಹೇಳುವವರೂ ಸಹ ನಾನಲ್ಲ.

ಪರಿಣಾಮ: ನಾನು ಆಲೋಚನೆಗಳಲ್ಲ. ಯಾವ ಯೋಚನೆಯೂ ನನ್ನದಲ್ಲ.

ಆಸೆಗಳು:--

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ 'ಆಸೆಗಳೊಂದಿಗೆ ' ನನ್ನ ಸಂಬಂಧ:--

ನಾನು ಆಸೆಗಳನ್ನು ಅನುಭವಿಸುತ್ತಿದ್ದೇನೆಯೇ ಅಥವಾ ಆಸೆಗಳು ನನ್ನನ್ನು ಅನುಭವಿಸುತ್ತಿವೆಯೇ?

ಅವು( ಆಸೆಗಳು) ಬಂದು ಹೋಗುತ್ತವೆಯೇ?

ಎರಡು ನಿಯಮಗಳನ್ನು ಬಳಸಿ ಮತ್ತು ಬಯಕೆ ನನ್ನದೇ ಎಂದು ಪರಿಶೀಲಿಸಿ.

ಪರಿಣಾಮ: ನಾನು ಆಸೆಗಳಲ್ಲ. ಆಸೆಗಳು ಯಾವುದೂ ನನ್ನದಲ್ಲ.

ಸ್ಮರಣೆ:--(ನೆನಪು)

ನೇರ ಅನುಭವ ಮತ್ತು ತರ್ಕದ ಬೆಳಕಿನಲ್ಲಿ 'ನೆನಪಿಗಳಿಗೆ ನನ್ನ ಜೊತೆಗಿರುವ ಸಂಬಂಧ:--

ನಾನು ಸ್ಮರಣೆಯನ್ನು(ನೆನಪು) ಅನುಭವಿಸುತ್ತಿದ್ದೇನೆಯೇ ಅಥವಾ ನೆನಪುಗಳು ನನ್ನನ್ನು ಅನುಭವಿಸುತ್ತಿವೆಯೇ?

ಅವು ಬಂದು ಹೋಗುತ್ತವೆಯೇ? ನೆನಪುಗಳು ಬದಲಾಗುತ್ತಿವೆಯೇ? ನೆನಪುಗಳು ಬದಲಾಗುತ್ತಿರುವಾಗ ನಾನು ಬದಲಾಗುತ್ತಿದ್ದೇನೆಯೇ?

ನಾನು ಏನನ್ನಾದರೂ ಮರೆತಾಗ "ನಾನು" ಮರೆತಿದ್ದೇನೆ ಎಂದು ಹೇಳುತ್ತೇನೆಯೇ ಅಥವಾ "ನಾನು " ಇರಲಿಲ್ಲವೆಂದು ಹೇಳುತ್ತೇನೆಯೆ?

ಒಂದು ವರ್ಷದ ಹಿಂದೆ ನಾನು ಏನು ಧರಿಸಿದ್ದೆ ಎಂದು ನನಗೆ ನೆನಪಿದೆಯೇ? ನಾನು ಅಲ್ಲಿ ಇರಲಿಲ್ಲ ಎಂದು ನಾನು ಹೇಳಬಹುದೇ ಅಥವಾ ನಾನು ಮರೆತಿದ್ದೇನೆ ಎಂದು ಹೇಳಬಹುದೇ? ಹಾಗಾಗಿ ಮರೆತರೂ "ನಾನು" ಅಲ್ಲಿದ್ದೆ.

ಜ್ಞಾಪಕದಲ್ಲಿ(ಸ್ಮರಣೆ) ಏನಿದೆ? ನನ್ನ ಹೆಸರು ಏನು? ಯಾರೋ ನನಗೆ ಹೆಸರನ್ನು ಇಟ್ಟರು ಹಾಗಾಗಿ ಅದು ನನ್ನ ನೆನಪಿನಲ್ಲಿದೆ. ನಾನು ಅದನ್ನು ಥಟ್ಟನೆ ನೆನಪಿಸಿಕೊಳ್ಳಬಲ್ಲೆ ಆದರೆ ಅದು ನೆನಪಿನಲ್ಲಿದೆ. ನಾನು ನೆನಪು ಅಲ್ಲವಾದ್ದರಿಂದ ಹೆಸರೂ ಸಹ ನಾನಲ್ಲ. ಇದು ಕೇವಲ ಹೆಸರಾಗಿದೆ.

ಶಿಕ್ಷಣ ಎಂದರೆ ಏನು? ಎಲ್ಲಿದೆ?


ಜ್ಞಾಪಕಶಕ್ತಿ , ವಿದ್ಯೆ, ನನ್ನ ವೃತ್ತಿ ಅಥವಾ ಕೌಶಲ್ಯ ಯಾವುದೂ ನನ್ನದಲ್ಲ. ಎಲ್ಲವೂ ನೆನಪಿನಲ್ಲುಳಿದಿವೆ.

ನನಗೆ ನನ್ನ ತಾಯಿ, ತಂದೆ, ಗಂಡ, ಮಗ ಹೀಗೆ ನೆನಪಿದೆಯಾ.. ನೆನಪು ಅಳಿಸಿ ಹೋದರೆ ಸಂಬಂಧಗಳು ಎಲ್ಲಿವೆ? ನಾನು ಯಾರೂ ಅಲ್ಲ ಎಂದು ಹೇಳುತ್ತೇನೆಯೇ ಅಥವಾ ನನ್ನ ಸಂಬಂಧಿಕರು ಯಾರೂ ನೆನಪಿಲ್ಲ ಎಂದು ಹೇಳುತ್ತೇನೆಯೇ?

ನೆನಪು ಮಾಯವಾದರೆ ಎಲ್ಲ ಸಂಬಂಧಗಳೂ ಇಲ್ಲವಾಗುತ್ತವೆ.

ಜಾತಿ, ಧರ್ಮ, ರಾಷ್ಟ್ರೀಯತೆ ಇತ್ಯಾದಿ ಎಲ್ಲಿವೆ? ಜನರು ನನಗೆ ಈ ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ ಆದರೆ ನಾನು ಇದ್ಯಾವುದೂ ಅಲ್ಲ. ನಾನು ಮಗುವಾಗಿದ್ದಾಗ ಇತರರು ಹೇರಿದ ದೃಷ್ಟಿಕೋನಗಳು ಅವು.

ಪರಿಣಾಮ:--

ನಾನು ಸ್ಮೃತಿಯಲ್ಲ(ನೆನಪುಗಳು) ಮತ್ತು ಸ್ಮೃತಿಯಲ್ಲಿರುವ ಯಾವ ವಿಷಯವೂ ನಾನಾಗಿರಲು ಸಾಧ್ಯವಿಲ್ಲ.

ಲಿಂಗ--

ನಾನು ಪುರುಷನೋ ಅಥವಾ ಹೆಣ್ಣೋ? ನನಗೆ ಹೇಗೆ ಗೊತ್ತು? ನನ್ನ ದೇಹದಿಂದಾಗಿ.

ಎರಡು ರೀತಿಯ ದೇಹಗಳಿವೆ: -ಗಂಡು ಮತ್ತು ಹೆಣ್ಣು. ಆದರೆ ದೇಹವು ನಾನಲ್ಲ ಎಂದು ನಾವು ಈಗಾಗಲೇ ನೋಡಿದ್ದೇವೆ.

ನಾನು ಯಾವ ರೀತಿಯ ದೇಹವನ್ನು ಹೊಂದಿದ್ದೇನೆ ಎಂಬ ಕಾರಣದಿಂದ ನಾನು ಮಹಿಳೆ / ಪುರುಷ ಎಂದು ಹೇಳಲಾಯಿತು. ಈ ಹೇಳಿಕೆಯನ್ನು ಅಳಿಸಿದರೆ, ಇವುಗಳನ್ನು ಯಾವುದೇ ಲಿಂಗದೊಂದಿಗೆ ಗುರುತಿಸುವ ಅಗತ್ಯವಿಲ್ಲ.

ಲಿಂಗ/ಪುರುಷ-ಮಹಿಳೆಯರ ಕುರಿತಾಗಿ ಹೇರಲಾದ ಎಲ್ಲಾ ಪರಿಕಲ್ಪನೆಗಳು ಈಗ ಇಲ್ಲವಾಗಿವೆ. ಅವುಗಳು ನೆನಪೇ ಹೊರತು ಬೇರೇನೂ ಅಲ್ಲ.

ನಾನು ಎಂದು ಹೇಳಬಹುದಾದ ಯಾವುದಾದರೂ ಉಳಿದಿದೆಯೇ?

ನಾನು ಏನೆಂದುಕೊಂಡೆನೋ ಅದೆಲ್ಲವೂ ನೆನಪಿನ ಭಾಗವೇ. ಮತ್ತು ಎರಡು ನಿಯಮಗಳನ್ನು ಬಳಸಿಕೊಂಡು ಯಾವುದೇ ನೆನಪುಗಳು ನಾನಲ್ಲ ಎಂದು ನಾನು ಕಂಡುಕೊಳ್ಳುತ್ತೇನೆ. ಇದು ತಾರ್ಕಿಕವಾಗಿ ಯಾವುದೇ ಅನುಭವಗಳು ನಾನಲ್ಲ ಎಂದು ತಿಳಿಯುವಂತೆ ಮಾಡುತ್ತದೆ. ಎಲ್ಲಾ ಅನುಭವಗಳು ಸ್ಮೃತಿಯಲ್ಲಿ ಸಂಗ್ರಹವಾಗಿವೆ ಮತ್ತು ನೆನಪು ನಾನಲ್ಲದಿದ್ದರೆ ಏನನ್ನು ಅನುಭವಿಸಬಹುದೋ ಅದು ನಾನಾಗಿಯೂ ಇರಲಾರದು.

ಪರಿಣಾಮ: ನನಗೆ ಅನುಭವವಿಲ್ಲ. ಯಾವ ಅನುಭವವೂ ನನ್ನದಲ್ಲ.

ಅನುಭವಿ:--

ಈಗ ಪ್ರಶ್ನೆಯನ್ನು ಕೇಳಿ- ನಾನು ಪ್ರಪಂಚದ ವಸ್ತುಗಳಲ್ಲ, ದೇಹವಲ್ಲ, ಸಂವೇದನೆಗಳಲ್ಲ, ಭಾವನೆಗಳಲ್ಲ, ಆಲೋಚನೆಗಳಲ್ಲ, ಆಸೆಗಳಲ್ಲ, ಸ್ಮರಣೆಯಲ್ಲ ಮತ್ತು ಅನುಭವಗಳಲ್ಲ; "ನಾನು" ಇನ್ನೂ ಅಲ್ಲಿದ್ದೇನೆಯೇ?

ಏನೂ ಇಲ್ಲದಿದ್ದರೆ, ಎಲ್ಲಾ ಅನುಭವಗಳನ್ನು ಯಾರು ನೋಡುತ್ತಿದ್ದಾರೆ?

ನಾನು ಈಗಲೂ ಇದ್ದೇನೆ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ನಾನು ಅನುಭವಿ. ನಾನೇ ಸಾಕ್ಷಿ. ಅದು ಇರುವ ಮೂಲಕ ಸರಳವಾಗಿ ತಿಳಿಯುತ್ತದೆ, ಅದನ್ನು ಅನುಭವಿಸುವ ಮೂಲಕ ಅಲ್ಲ, ನಾನು ಯಾವುದೇ ಅನುಭವವಲ್ಲ. ಅದು ನಾನಲ್ಲ ಎಂದು ನಾನು ಹೇಳಬಹುದೇ?

ರೂಪ (ಆಕಾರ):--

ಈಗ ಸಾಕ್ಷಿಯನ್ನು ವಿಚಾರಿಸೋಣ. ಈ ಸಾಕ್ಷಿಯಲ್ಲಿ ನಾನು ಯಾವುದೇ ಆಕಾರ, ರೂಪ, ಬಣ್ಣ, ವಸ್ತುವನ್ನು ಅನುಭವಿಸುತ್ತೇನೆಯೇ?

ಒಂದು ರೂಪ ಇದ್ದರೆ ನನ್ನ ಕಣ್ಣುಗಳು ಅದನ್ನು ನೋಡುತ್ತವೆ. ಅಲ್ಲಿ ಏನಾದರೂ ಇದ್ದರೂ ಸಹ ಅದು ನಾನಲ್ಲ. ಅದು ಈಗಲೂ ಇದೆ. ಆದರೆ ಅಲ್ಲಿ ಏನೂ ಇಲ್ಲ. ಇದು ಖಾಲಿಯಾಗಿದೆ. ಅದಕ್ಕೆ ಬಣ್ಣ, ಆಕಾರ, ರೂಪ ಇಲ್ಲ, ಅದು ವಸ್ತು ಅಲ್ಲ, ಆದರೆ ಅದು ಹಾಗೆಯೇ ಇದೆ.

ಯಾವುದೇ ಶಕ್ತಿ, ಸ್ಥಿತಿ, ವಿದ್ಯುತ್, ಪರಮಾಣು ಇವುಗಳಿಗೆ ಪರಿಮಾಣ ಇದೆಯೇ? ಈ ವಿಷಯಗಳನ್ನು ನೋಡಬಹುದು/ಅನುಭವಿಸಬಹುದು ಅಥವಾ ಇವು ಬದಲಾಗಬಹುದು. ಸಾಕ್ಷಿಯಲ್ಲಿ ಈ ರೀತಿಯ ಯಾವುದನ್ನೂ ಅನುಭವಿಸಲು ಸಾಧ್ಯವಿಲ್ಲ.

ಪರಿಣಾಮ: ನಾನು ನಿರಾಕಾರ.

ಬದಲಾವಣೆ

ಬದಲಾವಣೆಯಾದ ತಕ್ಷಣ ನಾವು ಅದನ್ನು ನೋಡಬಹುದು, ಆದರೆ ನಿಯಮ ಸಂಖ್ಯೆ ಎರಡು ಹೇಳುತ್ತದೆ - ಅದು ಬದಲಾದರೆ ಅದು ನಾನಲ್ಲ.

ಯಾವುದೇ ಬದಲಾವಣೆಗಳು ಅಶಾಶ್ವತ ಮತ್ತು ಬದಲಾಗದಿರುವುದು ಶಾಶ್ವತ. ನಾನೊಬ್ಬನೇ ಶಾಶ್ವತ, ಉಳಿದದ್ದು ಬದಲಾವಣೆ.

ಪರಿಣಾಮ: ನಾನು ಬದಲಾಗಿಲ್ಲ.

ಜನನ:-

ನಾನು ಯಾವಾಗ ಹುಟ್ಟಿದೆ?

ಮಗುವಿನ ಜನನವು ದೇಹದ ರಚನೆಯಾಗಿದೆ. ಇದು ದೇಹದ ಜನನವಾಗಿತ್ತು ಆದರೆ ಈಗ ಆ ಚಿಕ್ಕ ದೇಹವು ಇಲ್ಲವಾಗಿದೆ. ದೇಹವೊಂದು ಹುಟ್ಟಿತು ಮತ್ತು ನಾನು ಹುಟ್ಟಿದ್ದೇನೆ ಎಂದು ಹೇಳಿದರು. ಆದರೆ ನಾನು ಆ ದೇಹವಲ್ಲ, ಮತ್ತು ನಾನು ಬೆಳೆದ ಈ ದೇಹವೂ ಅಲ್ಲ, ಇದು( ದೇಹವು) ಅಂಗಗಳು, ಸಾವಯವ ವಸ್ತು, ಆಹಾರ ಇತ್ಯಾದಿಗಳ ಸಂಗ್ರಹವಾಗಿದೆ. ನಾನು ಹುಟ್ಟಿದ್ದೇನೆ ಎಂದು ಹೇಳಲಾರೆ, ಆದರೂ ನಾನು ಇಲ್ಲಿದ್ದೇನೆ.

ಜನನವು ಬದಲಾವಣೆಯ ಪ್ರಕ್ರಿಯೆ, ಆದರೆ ನಾನು ಬದಲಾಗದವನು, ಆದ್ದರಿಂದ ನನ್ನ ಜನ್ಮ ಅಸಾಧ್ಯ.

ಸಾಕ್ಷಿ ಹುಟ್ಟಿದ್ದು ಯಾವಾಗ ಅಂತ ಯಾವ ಪ್ರಮಾಣ ಪತ್ರ ಹೇಳಲು ಸಾಧ್ಯವಿಲ್ಲ. ಸಾಕ್ಷಿಯಲ್ಲಿ ರೂಪವನ್ನು ಪಡೆಯುವಂತಹದ್ದು ಯಾವುದೂ ಇಲ್ಲ, ಅದು ನಿರಾಕಾರವಾಗಿದೆ, ಆದ್ದರಿಂದ ಸಾಕ್ಷಿಗೆ ಜನ್ಮವಿಲ್ಲ ದೇಹಗಳು ಮಾತ್ರ ಹುಟ್ಟಬಹುದು, ನಾನಲ್ಲ.

ಹಾಗಾಗಿ ನಾನು ಹುಟ್ಟುವುದು ಅಸಾಧ್ಯ.

ಪರಿಣಾಮ: ನಾನು ಜನ್ಮವಿಲ್ಲದವನು, ನಾನು ಜನ್ಮರಹಿತನು.

ವಯಸ್ಸು ಮತ್ತು ಸಾವು:-

ನನಗೆ ವಯಸ್ಸಾಗುತ್ತಿದೆಯೇ?

ನಾನು ಹುಟ್ಟದಿದ್ದರೆ ನನಗೆ ವಯಸ್ಸಾಗಬಹುದೇ?

ವಯಸ್ಸಾಗುವುದು ಬದಲಾವಣೆಯ ಪ್ರಕ್ರಿಯೆ. ಆದರೆ ನಾನು ಎಂದಿಗೂ ಬದಲಾಗುವುದಿಲ್ಲ, ಆದ್ದರಿಂದ ನನಗೆ ಎಂದಿಗೂ ವಯಸ್ಸಾಗುವುದಿಲ್ಲ. ಸಾಕ್ಷಿಯಲ್ಲಿ ವಯಸ್ಸಾಗುವ ಅಥವಾ ಕಾಲಾನಂತರದಲ್ಲಿ ಕ್ಷೀಣಿಸುವ ಯಾವುದೂ ಇಲ್ಲ.

ಏನಾದರೂ ಹುಟ್ಟಿದರೆ ಸಾಯುವುದೇ?

ಮರಗಳು ಹುಟ್ಟುತ್ತವೆ ಮತ್ತು ಸಾಯುತ್ತವೆ, ಕೊಳಕು ಮತ್ತೆ ಕೊಳೆಗೇ ಸೇರುತ್ತದೆ. ಮನುಷ್ಯರು ಹುಟ್ಟುತ್ತಾರೆ ಮತ್ತು ಸಾಯುತ್ತಾರೆ. ವಸ್ತುಗಳನ್ನು ನಿರ್ಮಿಸಲಾಗಿದೆ, ಜೋಡಿಸಲಾಗಿದೆ ಮತ್ತು ಕಳಚಲಾಗುತ್ತದೆ. ಏನೂ ಉಳಿದಿಲ್ಲ. ಹುಟ್ಟುವ ಯಾವುದೇ ವಸ್ತುವು ಸಾಯುವುದು ನಿರ್ಧಾರಿತವಾಗಿದೆ. ಸಾವು ಕೂಡ , ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಆಗುವುದೇ ಸಾವು.

ನಾನು ಹುಟ್ಟದಿದ್ದರೆ ಸಾಯಬಹುದೇ?

ನಾನು ಎಂದಿಗೂ ಹುಟ್ಟಿಲ್ಲ, ಸಾಯಲು ಸಾಧ್ಯವಿಲ್ಲ. ಸಾವು ಕೂಡ ಒಂದು ವಸ್ತು ಮತ್ತೊಂದು ರೂಪದ ಬದಲಾವಣೆ ಮಾತ್ರ.


ಪರಿಣಾಮ:- ನಾನು ಜನ್ಮವಿಲ್ಲದವನು, ನಾನು ಜನ್ಮರಹಿತನು.

ವಿಮೋಚನೆ( ಮುಕ್ತಿ) ಮತ್ತು ಪುನರ್ಜನ್ಮ ನನಗೆ ಹುಟ್ಟು ಸಾವು ಇಲ್ಲದಿದ್ದರೆ ಪುನರ್ಜನ್ಮ ಸಾಧ್ಯವೇ?

ನಾನು ಎಂದಿಗೂ ಹುಟ್ಟಲಿಲ್ಲ, ನಾನು ಎಂದಿಗೂ ಸಾಯುವುದಿಲ್ಲ ಮತ್ತು ನಾನು ಪುನಃ ಹುಟ್ಟುವುದಿಲ್ಲ. ಯಾವುದು ಪದೇ ಪದೇ ಜನ್ಮಗಳನ್ನು ತೆಗೆದುಕೊಳ್ಳುತ್ತಿದೆಯೊ ಅದು ನಾನಲ್ಲ.

ಸಾಂಪ್ರದಾಯಿಕವಾಗಿ ವಿಮೋಚನೆ( ಮುಕ್ತಿ) ಎಂದರೇನು? ಇದು ಜನನ-ಮರಣಗಳ ಚಕ್ರಗಳಿಂದ ಮುಕ್ತರಾಗಬೇಕು ಎಂಬ ಕಲ್ಪನೆ.

ನಾನು ಮತ್ತೆ ಹುಟ್ಟುವುದು ಸಾಧ್ಯವೇ? ಇಲ್ಲ ! ಹಾಗಾಗಿ ನಾನು ಈಗಾಗಲೇ ಈ ಚಕ್ರದಿಂದ ಮುಕ್ತನಾಗಿದ್ದೇನೆ.

ಇಲ್ಲಿ ನನ್ನ ವಿಮೋಚನೆ( ಮುಕ್ತಿ).

ಸ್ವಾತಂತ್ರ್ಯ ಎಂದರೇನು: ಯಾವುದಕ್ಕೂ ಬದ್ಧವಾಗದೆ ಇರುವುದು, ಸಾಕ್ಷಿಯನ್ನು ಬಂಧಿಸುವಂಥದು ಏನಾದರೂ ಇದೆಯೇ?

ನನಗೆ ತಿನ್ನುವುದು, ಮಲಗುವುದು, ವಿಶ್ರಾಂತಿ ಪಡೆಯುವುದು ಬೇಕೇ? ಯಾರಾದರೂ ನನ್ನನ್ನು ಜೈಲಿಗೆ ಹಾಕಬಹುದೇ? ಹೀಗೆ ಪರೀಕ್ಷಿಸಿ ನೋಡಿದಾಗ ಬಂಧನವೂ ಇಲ್ಲ, ಮಿತಿಗಳೂ ಇಲ್ಲ. ನನ್ನಲ್ಲಿ ಮಿತಿಯೇ ಇಲ್ಲ.

ಪರಿಣಾಮ:- ನಾನು ಮುಕ್ತನಾಗಿದ್ದೇನೆ, ಸ್ವತಂತ್ರನಾಗಿದ್ದೇನೆ, ಬಂಧನ ಮುಕ್ತ ಮತ್ತು ಮಿತಿಯಿಲ್ಲದವನು ಆಗಿದ್ದೇನೆ.

ಶಾಂತಿ ಮತ್ತು ಆನಂದ:-

ಯಾವುದೇ ಆಸೆ, ಆಲೋಚನೆ, ಭಾವನೆ, ಮಾಡಲು ಏನೂ ಇಲ್ಲದಿರುವಾಗ ನಾನು ಶಾಂತಿಯಲ್ಲೇ ಇರುತ್ತೆನಲ್ಲವೆ? ಈ ಶಾಂತಿಗೆ ಭಂಗ ತರುವಂಥದ್ದು ಏನಾದರೂ ಇದೆಯೇ? ಅಲ್ಲಿ ನಿಜವಾಗಿಯೂ ಏನೂ ಆಗುವುದಿಲ್ಲ.

ಸಂತೋಷ ಮತ್ತು ದುಃಖ ಎರಡರ ಸಂಪೂರ್ಣ ಅನುಪಸ್ಥಿತಿಯಿದೆ. ಈ ಸ್ಥಿತಿಯನ್ನು ಆನಂದ ಎಂದು ಕರೆಯಲಾಗುತ್ತದೆ. ಇದು ನನ್ನ ನಿಜವಾದ ಸ್ವಭಾವ( ಸ್ವ - ಭಾವ).

ಪರಿಣಾಮ: ನಾನು ಶಾಶ್ವತವಾಗಿ ಶಾಂತಿ ಮತ್ತು ಆನಂದಮಯ ನಾಗಿದ್ದೇನೆ. ಅದು ಎಂದಿಗೂ ಅಳಿಯುವುದಿಲ್ಲ.

ಪ್ರೀತಿ:-

ನೀವು ಕೇಳಿದ ಎಲ್ಲಾ ಪ್ರಶ್ನೆಗಳನ್ನು ನಾನು ನಿಮಗೆ ಕೇಳಿದರೆ, ನಾನು ಏನು ಎಂದು ಹೇಳುತ್ತೇನೆ?

ನಿಮ್ಮ ಮತ್ತು ನನ್ನ ನಡುವೆ ಮೂಲಭೂತವಾಗಿ ಏನಾದರೂ ವ್ಯತ್ಯಾಸವಿದೆಯೇ?

ಗಾಜಿನ ಪಾತ್ರೆಯಲ್ಲಿರುವ ನೀರು ಗಾಜಿನ ಕೊಂಬಿನಲ್ಲಿರುವ ನೀರಿಗಿಂತ ಭಿನ್ನವಾಗಿದೆಯೇ? ಗಾಜಿನ ಪಾತ್ರೆಮತ್ತು ಗಾಜಿನ ಚೊಂಬು ಒಡೆದಾಗ, ನಾವು ನೀರನ್ನು ಬೇರ್ಪಡಿಸಬಹುದೇ? ನೀರು ಸಾರವಾಗಿದೆ( ತತ್ವ), ಇದು ವಿಭಿನ್ನ ಪಾತ್ರೆಗಳಲ್ಲಿ ಇರುವ ಒಂದೇ ನೀರು.

ನೀನು ಯಾರೋ ಅದೇ ನಾನು. ನಿನಗೂ ನನಗೂ ಯಾವ ವ್ಯತ್ಯಾಸವೂ ಇಲ್ಲ. ನಾನು ಅನುಭವಿ, ಮತ್ತು ನೀವೂ ಸಹ ಅನುಭವಿ.

ಸಾಗರದಲ್ಲಿನ ಎರಡು ಅಲೆಗಳು - ಒಂದು ಅಲೆ ನಾನು ನೀರು ಎಂದು ಹೇಳುತ್ತದೆ ಮತ್ತು ಇನ್ನೊಂದು ಅಲೆ ನಾನು ನೀರು ಎಂದು ಹೇಳುತ್ತದೆ. ಅವು ಒಂದೇ ಅಥವಾ ವಿಭಿನ್ನವೇ? ಬಹುಶಃ ರೂಪಗಳು ವಿಭಿನ್ನವಾಗಿವೆ, ಆದರೆ ಅವು ಒಂದೇ.

ರೂಪಗಳು ವಿಭಿನ್ನವಾಗಿರಬಹುದು ಅದು ನಾನಲ್ಲ, ಆದರೆ ಉಳಿದಿರುವುದು- ಸಾರ( ತತ್ವ) ಮಾತ್ರ. ಯಾವುದೇ ರೂಪವಿಲ್ಲದಿದ್ದರೆ, ನೀವು ಮತ್ತು ನಾನು ಒಂದೇ ಆಗುತ್ತೇವೆ. ಆದ್ದರಿಂದ ನೀವೇ ನಾನು ಮತ್ತು ನಾನೆ ನೀವು ಎನ್ನುವುದು ಸಿದ್ಧವಾಗುತ್ತದೆ. ಈ ತರಹ ಒಂದಾಗಿರುವುದಕ್ಕಿಂತ ಉತ್ತಮ ಸಂಬಂಧ ಯಾವುದಾದ್ರೂ ಇರಬಹುದೇ? ಇದಕ್ಕಿಂತ ಸಾಮೀಪ್ಯ ಮತ್ತೊಂದಿರಬಹುದೇ? ಇಬ್ಬರು ಒಂದಾದರೆ ಅದೇ ಪ್ರೀತಿ. ಯಾವುದೇ ಪ್ರತ್ಯೇಕತೆ ಇಲ್ಲ. ನಾವು ನಿಜವಾಗಿಯೂ ಒಬ್ಬ ಸಾಕ್ಷಿ.

ಆದ್ದರಿಂದ ಸಂಕ್ಷಿಪ್ತವಾಗಿ ನನ್ನ( ನಾನು) ವಿವರಣೆ--

ಜನ್ಮರಹಿತ

ಮರಣರಹಿತ

ವಯಸ್ಸಿಲ್ಲದ

ನಿರಾಕಾರ

ಬದಲಾವಣೆಯಿಲ್ಲದ

ಶೂನ್ಯ

ಶುದ್ಧ

ಶಾಶ್ವತ

ಸ್ವತಂತ್ರ (ಮುಕ್ತ)

ಶಾಂತಿ

ಆನಂದ

ಪ್ರೀತಿ

ಇದು ನನ್ನ ಅಸ್ತಿತ್ವ, ಇದು ನಾನು.

ಇದು ಆತ್ಮ (ಸ್ವಯಂ) ಸಾಕ್ಷಾತ್ಕಾರ.

ದಿನ 2 : ಪ್ರಪಂಚದ ಜ್ಞಾನ/ಭ್ರಮೆ

ನಾವು ಅನುಭವಿಸಬಹುದಾದ ಎಲ್ಲವು ಭ್ರಮೆ ಎಂದು ತಿಳಿಯಲು ನಾವು ಮತ್ತೆ ನೇರ ಅನುಭವ ಮತ್ತು ತರ್ಕದ ಸಾಧನಗಳನ್ನು ಬಳಸುತ್ತೇವೆ. ಅಥವಾ ನಾವು ಅನುಭವಿಸುತ್ತಿರುವ ಎಲ್ಲವೂ ಸುಳ್ಳು, ಯಾವುದೂ ನಿಜವಲ್ಲ.

ನೇರ ಅನುಭವ ಕೆಳಗಿನ ಪ್ರಶ್ನೆಗಳನ್ನು ಒಂದೊಂದಾಗಿ ನೀವೇ ಕೇಳಿಕೊಳ್ಳಿ.

ನಾನೀಗ ಎಲ್ಲಿದ್ದೇನೆ? (ಅಥವಾ ಈಗ ನನ್ನ ದೇಹ ಎಲ್ಲಿದೆ?)

ನನ್ನ ಮುಂದೆ ಏನಿದೆ? (ವಸ್ತುವನ್ನು ಹೆಸರಿಸಿ)

ಈ ವಸ್ತುವನ್ನು ಮಾತ್ರ ನೋಡೋಣ. ನಾನು ವಸ್ತುವನ್ನು ನೋಡುತ್ತಿದ್ದೇನೆಯೇ ಅಥವಾ ನಾನು ವಸ್ತುವನ್ನು ನೇರವಾಗಿ ಅನುಭವಿಸುತ್ತಿದ್ದೇನೆಯೇ ಅಥವಾ ನನ್ನ ಕಣ್ಣುಗಳು ಯಾವ ವಸ್ತುವನ್ನು ನೋಡುತ್ತಿವೆಯೋ ಏನನ್ನು ಅದನ್ನು ನಾನು ಅನುಭವಿಸುತ್ತಿದ್ದೇನೆಯೇ?

ಈ ವಸ್ತುವಿನ ಬಗ್ಗೆ ನಿಮ್ಮ ಕಣ್ಣುಗಳು ನೋಡುತ್ತಿರುವುದನ್ನು ಮಾತ್ರ ನೀವು ಅನುಭವಿಸುತ್ತಿರುವಿರಿ ಎಂದು ತಿಳಿಯುತ್ತದೆ.

ಅದರಲ್ಲಿ ಏನಾದರೂ ಸಂದೇಹವಿದೆಯೇ?

ಈಗ, ನಿಮ್ಮ ಮುಂದೆ ಕೆಂಪು ಟೊಮೆಟೊ ಇದೆ ಎಂದು ಹೇಳೋಣ.

ಟೊಮೆಟೊದ ಬಣ್ಣ ಯಾವುದು?

ನೀವು ಕೆಂಪು ಎಂದು ಹೇಳುವ ಸಾಧ್ಯತೆಯಿದೆ.

ನಾವು ಈ ಟೊಮೇಟೊ ಮೇಲೆ ನೀಲಿ ಬೆಳಕನ್ನು ಬೆಳಗಿಸಿದರೆ ಟೊಮೆಟೊದ ಬಣ್ಣ ಯಾವುದು?

ಅದು ಕಪ್ಪು ಬಣ್ಣದ್ದಾಗಿರುತ್ತದೆ. ಟೊಮೇಟೊ ಕೆಂಪು ಬಣ್ಣವನ್ನು ಕಾಣುತ್ತದೆ ಏಕೆಂದರೆ ಅದು ಬಿಳಿ ಬೆಳಕನ್ನು ತೆಗೆದುಕೊಳ್ಳುತ್ತದೆ, ಎಲ್ಲವನ್ನೂ ಹೀರಿಕೊಳ್ಳುತ್ತದೆ ಮತ್ತು ಕೆಂಪು ಬೆಳಕನ್ನು ಪ್ರತಿಫಲಿಸುತ್ತದೆ. ನಾವು ಅದರಿಂದ ಕೆಂಪು ಬೆಳಕನ್ನು ತೆಗೆದರೆ, ಅದು ಎಲ್ಲಾ ಬೆಳಕನ್ನು ಹೀರಿಕೊಳ್ಳುತ್ತದೆ ಮತ್ತು ಕಪ್ಪು ಬಣ್ಣದಲ್ಲಿ ಕಾಣುತ್ತದೆ.

ಟೊಮೆಟೊದ ನಿಜವಾದ ಬಣ್ಣ ಯಾವುದು?

ಬಿಳಿ ಬೆಳಕಿನಲ್ಲಿ ಮಾತ್ರ ನಾನು ಬಣ್ಣವನ್ನು ತೆಗೆದುಕೊಳ್ಳುತ್ತೇನೆ ಎಂದು ಒಬ್ಬರು ಹೇಳಿದರೆ, ಟೊಮೆಟೊದ ಬಣ್ಣವನ್ನು ಕೆಂಪು ಎಂದು ತೆಗೆದುಕೊಳ್ಳಲಾಗುತ್ತದೆ. ಕಿತ್ತಳೆ ಬೆಳಕು ಇರುವಾಗ ನಾನು ನಿಜವಾದ ಬಣ್ಣವನ್ನು ತೆಗೆದುಕೊಳ್ಳುತ್ತೇನೆ ಎಂದು ಯಾರಾದರೂ ಹೇಳಬಹುದು; ಬಿಳಿ ಅಲ್ಲ, ನೀಲಿ ಅಲ್ಲ. ಬೇರೆ ಬೇರೆ ಜನರು ವಿವಿಧ ದೀಪಗಳ ಅಡಿಯಲ್ಲಿ ಟೊಮೆಟೊವನ್ನು ನೋಡಲು ಆರಿಸಿಕೊಂಡರೆ, ಟೊಮೆಟೊದ ನಿಜವಾದ ಬಣ್ಣ ಯಾವುದು?

ನಿಜವಾಗಿ ಬಣ್ಣ ಎನ್ನುವುದು ಇಲ್ಲ. ನಿರಂಕುಶವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಇದು ಕೆಂಪು ಎಂದು ಅನೇಕ ಜನರು ಒಪ್ಪುತ್ತಾರೆ. ಸೂರ್ಯನು ಬಿಳಿ ಬಣ್ಣಕ್ಕೆ ಬದಲಾಗಿ ನೀಲಿ ಬೆಳಕನ್ನು ಹೊಂದಿದ್ದಾನೆ ಎಂದು ಹೇಳೋಣ, ಆಗ ಎಲ್ಲರೂ ಟೊಮೆಟೊ ಕಪ್ಪು ಎಂದು ಒಪ್ಪಿಕೊಳ್ಳುತ್ತಾರೆ. ಅದು ವಾಸ್ತವವಾಗುತ್ತದೆ.

ನಮ್ಮ ಕಣ್ಣುಗಳು ನಮಗೆ ಹೇಳುವ ಆಕಾರ ಮತ್ತು ಬಣ್ಣವನ್ನು ನಾವು ಅನುಭವಿಸುತ್ತೇವೆ. ವಾಸ್ತವವು ಎಂದಿಗೂ ಕಾಣಿಸುವುದಿಲ್ಲ, ಯಾರಿಗೂ ತಿಳಿದಿಲ್ಲ. ಆದ್ದರಿಂದ ನಿಜವಾದ ಬಣ್ಣವಿಲ್ಲ ಎಂದು ನಾವು ನೋಡುತ್ತೇವೆ, ಅದು ಅನಿಯಂತ್ರಿತವಾಗಿದೆ.

ಒಬ್ಬ ವ್ಯಕ್ತಿಯು ದೃಷ್ಟಿಯಲ್ಲಿ ಸಮಸ್ಯೆಯನ್ನು ಹೊಂದಿದ್ದರೆ ಅವನು ಇಬ್ಬರನ್ನು ನೋಡುತ್ತಾನೆ. ಮತ್ತು ಎರಡು ಟೊಮೆಟೊಗಳಿವೆ ಎಂದು ಅವರು ಹೇಳುತ್ತಾರೆ. ಹಾಗಾದರೆ ಎರಡು ಟೊಮೆಟೊಗಳಿವೆಯೇ?

ಪ್ರತಿಯೊಬ್ಬರ ಕಣ್ಣಿನಲ್ಲಿ ಅಂತಹ ದೋಷವಿದ್ದರೆ, ಎಲ್ಲರೂ ಎಷ್ಟು ಟೊಮೆಟೊಗಳನ್ನು ನೋಡಬಹುದು? ಎರಡು. ಸತ್ಯವು ಕೇವಲ ಒಪ್ಪಂದವಾಗಿದೆ.

ಕಣ್ಣು ಇಲ್ಲದವರು ಟ್ರಾಫಿಕ್ ದೀಪಗಳನ್ನು ಸಹ ನೋಡಲು ಸಾಧ್ಯವಿಲ್ಲ. ಅವರು ಎಂದಿಗೂ ಆ ಬಣ್ಣಗಳನ್ನು ನೋಡುವುದಿಲ್ಲ. ಕುರುಡನಿಗೆ ಚಂದ್ರನೂ ಇಲ್ಲ, ನಕ್ಷತ್ರಗಳೂ ಇಲ್ಲ. ಅವರಿಗೆ ಇಂದ್ರಿಯಗಳಿಂದಾಗಿ ಜಗತ್ತು ಕಾಣಿಸಿಕೊಳ್ಳುತ್ತದೆ. ವಿಭಿನ್ನ ಜೀವಿಗಳು ವಿಭಿನ್ನ ಇಂದ್ರಿಯಗಳನ್ನು ಹೊಂದಿವೆ. ಕೆಲವು ಜೀವಿಗಳು ನಮಗಿಂತ ಉತ್ತಮವಾದ ಇಂದ್ರಿಯಗಳನ್ನು ಹೊಂದಿವೆ.

ನಿಮ್ಮ ಸ್ಪರ್ಷದಲ್ಲೂ ದೋಷವಿದೆ ಎಂದು ಅಂದುಕೊಳ್ಳೋಣ ಆಗ ನೀವು ಏನನ್ನಾದರೂ ಸ್ಪರ್ಶಿಸಿದಾಗ ಅದು ಎರಡಾಗಿ ಕಾಣುತ್ತದೆ. ಹಾಗಾಗಿ ಎರಡು ಟೊಮೆಟೊಗಳಿವೆ ಎಂದು ಅನಿಸುವದರಲ್ಲಿ ಅನುಮಾನವಿರುವುದಿಲ್ಲ.

ಇಂದ್ರಿಯಗಳಿಂದ ಟೊಮೆಟೊಗಳು ಇವೆ ಎನ್ನುವ ಭ್ರಮೆ ಉತ್ಪತ್ತಿಯಾಗುತ್ತದೆ. ಇಂದ್ರಿಯಗಳು ಅಲ್ಲಿ ಏನಿದೆ ಎಂದು ಹೇಳುತ್ತವೆ. ವಾಸ್ತವವಾಗಿ ಅಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ.

ಜ್ವರ ಬಂದಾಗ ಏನು ತಿಂದರೂ ರುಚಿ ಅನಿಸುವುದಿಲ್ಲ, ಹಾಗಾಗಿ ವಸ್ತುಗಳಲ್ಲಿ ರುಚಿಯಿಲ್ಲ. ರುಚಿ ಏನೆಂದು ಹೇಳುವುದು ನಾಲಿಗೆ. ಯಾವುದರಲ್ಲೂ ನಿಜವಾದ ರುಚಿ ಎನ್ನುವುದಿಲ್ಲ.

ನಾವು ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ - ನಾವು ಮೂರು ಲೋಟ ನೀರು ತೆಗೆದು ಕೊಳ್ಳೋಣ. ಒಂದು ತುಂಬಾ ಬಿಸಿಯಾದ ನೀರು ಇನ್ನೊಂದು ಮಂಜುಗಡ್ಡೆ ತರಹ ತಣ್ಣಗಿರುವ ನೀರು ಮತ್ತು ಮಧ್ಯದಲ್ಲಿ ಕೋಣೆಯ ಉಷ್ಣಾಂಶವಿರುವ ನೀರು.

ನೀವು ಕುದಿಯುವ ನೀರಿನಲ್ಲಿ ನಿಮ್ಮ ಕೈಯನ್ನು ಅದ್ದಿ ಮತ್ತು ನಂತರ ನೀವು ಮಧ್ಯದ ಬಟ್ಟಲಿನಲ್ಲಿ ಅದ್ದಿರಿ, ನಿಮ್ಮ ಕೈಯು ತಣ್ಣಗಿರುವಂತೆ ಗ್ರಹಿಸುತ್ತದೆ. ನಂತರ ನೀವು ಮಂಜುಗಡ್ಡೆ ತರಹ ತಣ್ಣಗಿರುವ ನೀರಿನಲ್ಲಿ ಕೈ ಅದ್ದಿರಿ ಮತ್ತು ನಂತರ ಅದನ್ನು ಮತ್ತೆ ಮಧ್ಯದ ಬಟ್ಟಲಿನಲ್ಲಿ ಅದ್ದಿ ಆಗ ನಿಮ್ಮ ಕೈಗೆ ಬೆಚ್ಚಗಿರನ ಅನುಭವ ಆಗುತ್ತದೆ. ಮಧ್ಯದ ಬಟ್ಟಲಿನಲ್ಲಿ ನೀರು ಬಿಸಿಯಾಗಿದೆಯೇ ಅಥವಾ ತಣ್ಣಗಾಗಿದೆಯೇ? ಇದು ಮೂರನೇ ಬಟ್ಟಲಿಗೆ ಹೋಲಿಸಿದರೆ ಬಿಸಿಯಾಗಿರುತ್ತದೆ, ಆದರೆ ಮೊದಲನೆ ಬಟ್ಟಲಿಗೆ ಹೋಲಿಸಿದರೆ ತಂಪಾಗಿರುತ್ತದೆ.

ಇದು ಸಾಪೇಕ್ಷವಾಗಿದೆ. ಇಂದ್ರಿಯಗಳು ಇವನ್ನು ರೂಪಿಸುತ್ತಿವೆ. ಬಿಸಿ ಅಥವಾ ಶೀತ ಎನ್ನುವ ಅನುಭವಗಳು ನಿಜವಾಗಿಯೂ ಇಲ್ಲ.

ಇನ್ನೂ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ - ಕಳೆದ ಮೂರು ದಿನಗಳಿಂದ ತಿನ್ನದೇ ಇರುವ ಹಸಿದ ಭಿಕ್ಷುಕನಿಗೆ ನೀವು ಹಳಸಿದ ಬ್ರೆಡ್ ತುಂಡನ್ನು ಎಸೆದರೆ ಅವನ ಪ್ರತಿಕ್ರಿಯೆ ಹೇಗಿರುತ್ತದೆ? ಹತ್ತು ರೂಪಾಯಿ ಕೊಟ್ಟರೆ ತುಂಬಾ ಖುಷಿಯಾಗುತ್ತೆ. ನೀವು ಈಗ ಅದೇ ಬ್ರೆಡ್ ಅನ್ನು ಕೊಟ್ಟಯಾಧಿಷ ವ್ಯಕ್ತಯೊಬ್ಬನಿಗೆ ಎಸೆದರೆ ಅವನು ಹೇಗೆ ಭಾವಿಸುತ್ತಾನೆ? ಕೋಪ ಮತ್ತು ಅವಮಾನ. ಹಾಗಾಗಿ ವಸ್ತುಗಳು ಒಂದೇ ಆಗಿವೆ ಆದರೆ ಅದು ಒಬ್ಬ ವ್ಯಕ್ತಿಗೆ ಸಂತೋಷ ಮತ್ತು ಇನ್ನೊಬ್ಬ ವ್ಯಕ್ತಿಗೆ ದುಃಖವನ್ನು ನೀಡುವುದು ಹೇಗೆ ಸಾಧ್ಯ? ಇದು ಸಂಪೂರ್ಣವಾಗಿ ವ್ಯಕ್ತಿನಿಷ್ಠವಾಗಿದೆ.

ಯಾವುದೇ ಸಂತೋಷ ಮತ್ತು ದುಃಖ ಎನ್ನುವುದು ಇಲ್ಲ, ಅದು ಇದ್ದರೆ ಅದು ಯಾವುದನ್ನೂ ಅವಲಂಬಿಸಿಲ್ಲ. ಅದೊಂದು ಭ್ರಮೆ.

ಇದು ನೇರ ಅನುಭವವಾಗಿತ್ತು. ನಾವು ತರ್ಕವನ್ನು ನೋಡೋಣ.

ತರ್ಕಶಾಸ್ತ್ರ ನಾನು ನನ್ನ ಹೆಸರು XYZ ಎಂದು ಹೇಳಿದರೆ ಮತ್ತು ನಾನು ಅದನ್ನು ಪ್ರತಿದಿನ ಹೇಳಿದರೆ, ನನ್ನ ಹೆಸರೇನು?

ನಾನು ಒಂದು ದಿನ ನನ್ನ ಹೆಸರು ABC, ಎರಡನೇ ದಿನ DEF, ಮೂರನೇ ದಿನ GHI ಎಂದು ಹೇಳಿದರೆ- ಆಗ ನನ್ನ ಹೆಸರೇನು? ಇದು ಬದಲಾಗುತ್ತಲೇ ಇರುವುದರಿಂದ ನಿಜವಾದ ಹೆಸರಿಲ್ಲ. ಅದು ನಿಜವಲ್ಲ ಎಂದು ನೀವು ತಿಳಿಯಬಹುದು.

ನೀವು ವಸ್ತುವನ್ನು ಖರೀದಿಸಲು ಹೋಗುತ್ತೀರಿ ಮತ್ತು ಅಂಗಡಿಯವನು ಆ ವಸ್ತುವಿಗೆ 50 ರೂಪಾಯಿ ಎಂದು ಹೇಳುತ್ತಾನೆ, ಎರಡನೇ ದಿನ ಅವನು 70 ರೂಪಾಯಿ ಎಂದು ಹೇಳುತ್ತಾನೆ ಮತ್ತು ನಂತರ ಅದೇ ವಸ್ತುವಿಗೆ ಮೂರನೇ ದಿನ ಅವನು 30 ರೂಪಾಯಿ ಎಂದು ಹೇಳುತ್ತಾನೆ; ಪ್ರತಿದಿನ ದರವನ್ನು ಬದಲಾಯಿಸುತ್ತಿರುತ್ತಾನೆ ಹಾಗಾದರೆ ನಿಜವಾದ ಬೆಲೆ ಎಷ್ಟು? ವಾಸ್ತವಿಕವಾಗಿ ಯಾವುದೇ ದರವಿಲ್ಲ ಏಕೆಂದರೆ ಅದು ಬದಲಾಗುತ್ತಲೇ ಇರುತ್ತದೆ.

ನಾನು ಆಸ್ತಿಯನ್ನು ಖರೀದಿಸಲು ಹೋಗುತ್ತೇನೆ ಮತ್ತು ನಾನು ವಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಅವರು ನನಗೆ ಕೆಲವು ವಿವರಗಳನ್ನು ನೀಡುತ್ತಾರೆ. ನಂತರ ನಾನು ಕಾಗದಗಳನ್ನು ಕೇಳುತ್ತೇನೆ ಮತ್ತು ನಾನು ಅವುಗಳನ್ನು ನೋಡಿದಾಗ ಅವನು ಹೇಳಿದ ವಿವರಗಳಿಗಿಂತ ವಿಭಿನ್ನವಾಗಿದೆ. ನಾನು ಆಸ್ತಿಯನ್ನು ಖರೀದಿಸುತ್ತೇನೆಯೇ? ಇಲ್ಲ ಏಕೆಂದರೆ ಅಲ್ಲಿ ಮಾಹಿತಿ ಬದಲಾಗಿದೆ.

ನಾನು ಒಬ್ಬ ವ್ಯಕ್ತಿಯನ್ನು ಭೇಟಿಯಾಗುತ್ತೇನೆ ಮತ್ತು ಅವನು ಒಳ್ಳೆಯ ಸಹೋದ್ಯೋಗಿ ಆದರೆ ಒಂದು ತಿಂಗಳಲ್ಲಿ ಅವನಲ್ಲಿ ಬದಲಾವಣೆಗಳು ಕಾಣುತ್ತವೆ. ಅವನು ಸುಳ್ಳು ಹೇಳುತ್ತಾನೆ, ಅವನು ಕುಶಲತೆಯಿಂದ ಮಾತನಾಡುತ್ತಾನೆ, ಅವನು ಕೆಟ್ಟದ್ದನ್ನು ಹೇಳುತ್ತಾನೆ, ಈಗ ಅವನ ಮೇಲೆ ಯಾವುದೇ ನಂಬಿಕೆ ಇಲ್ಲ. ಅವನು ಮೊದಲಿನ ಹಾಗೆ ಇಲ್ಲ ಎಂದು ನಾವು ಹೇಳುತ್ತೇವೆ. ನಾನು ಅವನನ್ನು ನಂಬುತ್ತೇನೆಯೇ? ಇಲ್ಲ ಏಕೆಂದರೆ ಅವನು ಬದಲಾಗುತ್ತಿದ್ದಾನೆ.

ಯಾವುದು ಸರಿ ಅಥವಾ ತಪ್ಪು ಎಂದು ಕಂಡುಹಿಡಿಯುವ ಸಾಮಾನ್ಯ ವಿಧಾನವೆಂದರೆ ಅದು ಬದಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು.

ನಾನು ಸಮುದ್ರವನ್ನು ನೋಡಿದಾಗ, ನಾನು ಸಮುದ್ರದಲ್ಲಿ ಅಲೆಗಳನ್ನು ನೋಡುತ್ತೇನೆ. ನಾನುಅಳೆಗಲ್ಲಿಯನ್ನಷ್ಟೆ ಸಮುದ್ರದಿಂದ ಬೇರೆಯಾಗಿ ನೋಡಬಹುದೇ? ಯಾವುದು ಬದಲಾಗುತ್ತಿದೆ - ಅಲೆ ಅಥವಾ ನೀರು? ಅಲೆಗಳು ಸ್ವತಂತ್ರ ಅಸ್ತಿತ್ವವನ್ನು ಹೊಂದಿಲ್ಲದಿರುವುದರಿಂದ ಅವು ನಿಜವಾಗಿರಲು ಸಾಧ್ಯವಿಲ್ಲ. ಅವು ನೀರಿನ ಆಕಾರ, ಇದು ಮನಸ್ಸಿನಲ್ಲಿ ಒಂದು ಪರಿಕಲ್ಪನೆಯಾಗಿದೆ. ನಾವು ನೀರಿನ ಸಂಭವಿಸುವಿಕೆಯನ್ನು ಅಲೆ ಎಂದು ಹೆಸರಿಸಿದ್ದೇವೆ. ರೂಪ ಬದಲಾಗುತ್ತಿದೆ, ನೀರಲ್ಲ.

ನಾವು ಮಣ್ಣಿನ ಮಡಕೆ ಮತ್ತು ಮಣ್ಣಿನ ಉದಾಹರಣೆ ತೆಗೆದುಕೊಳ್ಳೋಣವೆ? ಈಗ ಮಣ್ಣನ್ನು ಗಣನೆಗೆ ತೆಗೆದುಕೊಳ್ಳಬಹುದೇ ಅಥವಾ ಮಣ್ಣಿನ ಮಡಕೆಯನ್ನೆ? ಇಲ್ಲಿ ಏನು ಬದಲಾಗುತ್ತಿದೆ, ಆಕಾರವೇ ಅಥವಾ ಮಣ್ಣೆ? ಏನು ಬದಲಾಗುತ್ತಿದೆ? ಮಡಕೆ ಬದಲಾಗುತ್ತಿದೆ, ಮಣ್ಣಿಲ್ಲ.

ಆಭರಣ ಮತ್ತು ಚಿನ್ನದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಆಭರಣಗಳು ಯಾವುದೇ ರೂಪವನ್ನು ತೆಗೆದುಕೊಳ್ಳಬಹುದು ಆದರೆ ಚಿನ್ನವಿಲ್ಲದೆ ನಾವು ಆಭರಣಗಳನ್ನು ಮಾಡಲು ಸಾಧ್ಯವಿಲ್ಲ. ರೂಪವು ಬದಲಾಗುತ್ತಿದೆ, ಸಾರವಲ್ಲ( ಮೂಲ ರೂಪ). ಸಾರವು ಬದಲಾಗುವುದಿಲ್ಲ.

ಜ್ಞಾನದ ಹಾದಿಯಲ್ಲಿ ಯಾವುದಾದ್ರೂ ಬದಲಾದರೆ, ಅದು ಅಸ್ತಿತ್ವದಲ್ಲಿಲ್ಲ, ಅದು ಅನಿವಾರ್ಯವಲ್ಲ, ಅದು ಕೇವಲ ಕಲ್ಪನೆ ಎಂದು ಹೇಳುತ್ತೇವೆ. ಸತ್ವವೆಂದರೆ ಅದು ಬದಲಾಗುವುದಿಲ್ಲ, ಹಾಗಾಗಿ ಅದನ್ನು ಯಾವಾಗಲೂ ಸತ್ಯವೆಂದು ಪರಿಗಣಿಸಲಾಗುತ್ತದೆ.

ಈಗ ನಮ್ಮ ಅನುಭವವನ್ನು ನೋಡೋಣ. ನಿಮ್ಮ ಅನುಭವದಲ್ಲಿ ಬದಲಾಗದ ಏನಾದರೂ ಇದೆಯೇ?

ಎಲ್ಲಾ ವಿಷಯಗಳು ಬದಲಾಗುತ್ತಿವೆ. ಹಾಗಾಗಿ ಎಲ್ಲವೂ ಸುಳ್ಳು. ಅದೊಂದು ಭ್ರಮೆ. ಯಾವುದೂ ನಿಜವಲ್ಲ,ಆದ್ದರಿಂದ ಯಾವುದು ಬದಲಾಗುತ್ತದೆಯೋ ಅದು ಸುಳ್ಳು.

ಬದಲಾಗದೆ ಇರುವುದು ಒಂದೇ ಒಂದು. ಅದು ನೀನು.

ಇಂದ್ರಿಯಗಳು ಏನನ್ನಾದರೂ ಅನುಭವಿಸುತ್ತಿರುತ್ತವೆ. ಆದರೆ ಅದು ಏನೆಂದು ನಮಗೆ ತಿಳಿದಿಲ್ಲ. ನಾವು ಅವುಗಳನ್ನು ಏಕೆ ನೈಜವಾಗಿ ನೋಡುತ್ತೇವೆ ಎಂದು ನಾವು ಗ್ರಹಿಸಿದಾಗ ಎಲ್ಲರೂ ಒಂದೇ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಯಾರಾದರೂ ಅದೇ ವಿಷಯವನ್ನು ತಪ್ಪು ಎಂದರೆ ಅವರ ಇಂದ್ರಿಯಗಳಲ್ಲೇ ಏನೋ ತಪ್ಪಾಗಿದೆ ಎಂದು ಹೇಳುತ್ತೇವೆ.

ಒಬ್ಬ ಕಲಾವಿದ ವರ್ಣಚಿತ್ರವನ್ನು ನೋಡುತ್ತಾನೆ ಎಂದು ಹೇಳೋಣ, ಅವನು ಅಲ್ಲಿ ವಿಶೇಷವಾಗಿ ಕಾಣುವುದನ್ನು ನೋಡುತ್ತಾನೆ ಮತ್ತು ಆದಾಗ್ಯೂ, ಹಳ್ಳಿಗರು ಅದರಲ್ಲಿ ಕಾಣುವ ಬಣ್ಣವನ್ನು ಮಾತ್ರ ನೋಡುತ್ತಾರೆ. ಹಾಗಾದರೆ ಚಿತ್ರಕಲೆ ಸುಂದರವಾಗಿದೆಯೇ ಅಥವಾ ಕೆಟ್ಟದಾಗಿ ಇದೆಯೇ? ಇದು ಸಂಪೂರ್ಣವಾಗಿ ಮನಸ್ಸಿನ ರಚನೆಯಾಗಿದೆ. ಯಾರು ವೀಕ್ಷಿಸುತ್ತಾರೆ ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಸೌಂದರ್ಯವು ಒಂದು ಭ್ರಮೆ. ಒಪ್ಪಂದವಿಲ್ಲ ಹಾಗಾಗಿ ಸುಂದರ ಪೇಂಟಿಂಗ್ ಎಂದು ಹೇಳಬಹುದು ಅಥವಾ ಇಲ್ಲ.

ಅಶಾಶ್ವತತೆ ಟೊಮೆಟೊದ ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ನಾವು ಟೊಮೆಟೊವನ್ನು ತೆಗೆದುಕೊಂಡು ಅದನ್ನು 5 ದಿನಗಳವರೆಗೆ ಮೇಜಿನ ಮೇಲೆ ಇಟ್ಟರೆ, ಏನಾಗುತ್ತದೆ?

ಈಗ ನಾವು ಎಲ್ಲವನ್ನೂ ಹಾಗೆಯೇ ಇಟ್ಟುಕೊಳ್ಳೋಣ, ಇಂದ್ರಿಯಗಳನ್ನು ಹಾಗೆಯೇ ಇಟ್ಟುಕೊಳ್ಳೋಣ, ಪ್ರಪಂಚದ ನಿಯಮಗಳು ಹಾಗೆಯೇ ಇರೋಣ, ಮನಸ್ಸನ್ನು ಹಾಗೆಯೇ ಇಟ್ಟುಕೊಳ್ಳೋಣ ಮತ್ತು ನಾವು ವೀಡಿಯೊವನ್ನು ಹೇಗೆ ವೇಗವಾಗಿ ಮುಂದಕ್ಕೆ ಮಾಡುತ್ತೇವೆಯೋ ಹಾಗೆಯೇ ಸಮಯವನ್ನು ವೇಗಗೊಳಿಸೋಣ. ಈಗ ನಾವು ಟೊಮ್ಯಾಟೊ 5 ಗಂಟೆಗಳಲ್ಲಿ ಕೊಳೆಯುತ್ತದೆ ಎಂದು ಹೇಳೋಣ ಮತ್ತು 5 ಗಂಟೆಗಳ ನಂತರ ಅದು ಇಲ್ಲ. ಟೊಮೆಟೊ ಬಗ್ಗೆ ನೀವು ಏನು ಹೇಳಲು ಹೊರಟಿದ್ದೀರಿ, ಇದು ನಿಜವೇ?

ಈಗ ನಾವು ಸಮಯವನ್ನು ಹೆಚ್ಚು ವೇಗಗೊಳಿಸೋಣ ಮತ್ತು ಈಗ ಅದು 5 ನಿಮಿಷಗಳಲ್ಲಿ ಕೊಳೆಯುತ್ತದೆ. ಇದು ನಿಜವಾದ ಟೊಮೆಟೊವೇ?

ಈಗ ನಾವು ಸಮಯವನ್ನು ವೇಗಗೊಳಿಸೋಣ ಮತ್ತು ಅದು 5 ಸೆಕೆಂಡುಗಳಲ್ಲಿ ಕೊಳೆಯುತ್ತದೆ. ನೀವು ಟೊಮೆಟೊವನ್ನು ಇಟ್ಟು ಕತ್ತರಿಸಲು ಚಾಕುವನ್ನು ಎತ್ತಿಕೊಳ್ಳಿ, ಅದು 5 ಸೆಕೆಂಡುಗಳಲ್ಲಿ ಕಣ್ಮರೆಯಾಗುತ್ತದೆ. ಟೊಮೆಟೊ ಬಗ್ಗೆ ನೀವು ಏನು ಯೋಚಿಸುತ್ತೀರಿ? ನೀವು ಬಹುಶಃ ಕನಸು ಕಾಣುತ್ತಿದ್ದೀರಿ ಎಂದು ನೀವು ಭಾವಿಸಬಹುದು. ನೀವು ನಿಜವಾಗಿಯೂ ಟೊಮೆಟೊ ಹೊಂದಿದ್ದೀರಾ ಎಂಬ ಅನುಮಾನವಿರಬಹುದು.

ಈಗ ಸಮಯವನ್ನು ಇನ್ನಷ್ಟು ವೇಗಗೊಳಿಸಿ ಮತ್ತು ಅದು ಸ್ವಲ್ಪ ಸಮಯದಲ್ಲೇ ಹೋಗುತ್ತದೆ. ಹಾಗಾದರೆ ನಿಜವಾಗಿ ಟೊಮೆಟೊ ಇದೆಯೇ?

ನೀವು ಕಣ್ಣುಗಳ ವ್ಯಾಪ್ತಿಯನ್ನು ಮೀರಿ ಇನ್ನಷ್ಟು ವೇಗವನ್ನು ಹೆಚ್ಚಿಸಬಹುದು. ನೀವು ಅದನ್ನು ಗಮನಿಸುವ ಮೊದಲೇ, ಅದು ಕಣ್ಮರೆಯಾಗುತ್ತದೆ.

ಸಮಯವನ್ನು ವೇಗಗೊಳಿಸುವ ಮೂಲಕ, ನಿಜವಾದ ಮತ್ತು ಉಪಯುಕ್ತವಾದದ್ದು ಸಂಪೂರ್ಣವಾಗಿ ನಕಲಿ ಮತ್ತು ನಿಷ್ಪ್ರಯೋಜಕವಾಗಿದೆ. ಅದು ತುಂಬಾ ವೇಗವಾಗಿ ಬದಲಾದರೆ ಏನೂ ಇರುವುದಿಲ್ಲ. ಇದು ಬದಲಾವಣೆ ಮಾತ್ರ. ಎಲ್ಲವೂ ಹೀಗೇ ಅಲ್ಲವೇ? ಸ್ವಲ್ಪ ಸಮಯದವರೆಗೆ ಮಾತ್ರ, ಅದು ನಿಜವಾಗಿಯೂ ಇದೆ ಎಂದು ನಾವು ಹೇಳುತ್ತೇವೆ, ಏಕೆಂದರೆ ಅದರ ಸ್ಮರಣೆ ಇರುವುದರಿಂದ.

ಟೊಮ್ಯಾಟೊ 5 ದಿನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ, ಆದ್ದರಿಂದ ಇದು ಬದುಕಲು ಉಪಯುಕ್ತವಾಗಿದೆ ಆದ್ದರಿಂದ ಇದು ನಿಜವಾಗಿದೆ. ಎಲ್ಲವೂ ಹಾಗೆಯೇ, ನಾವು ಸಮಯವನ್ನು ವೇಗಗೊಳಿಸಿದಾಗ ಅದು ಕನಸಿನಂತೆ ಆಗುತ್ತದೆ. ಕನಸು ಎಷ್ಟು ವೇಗವಾಗಿದೆ ಮತ್ತು ಅದು ಎಷ್ಟು ನಿಷ್ಪ್ರಯೋಜಕವಾಗಿದೆ ಎಂಬುದನ್ನು ನಾವು ನೋಡಬಹುದು. ಆ ಕನಸಿನ ಬಗ್ಗೆ ಎಲ್ಲವೂ ಅವಾಸ್ತವ ಮತ್ತು ಸುಳ್ಳು ಮತ್ತು ಅರ್ಥಹೀನ ಎಂದು ನಾವು ಹೇಳುತ್ತೇವೆ. ನಿಮಗೆ ಹೋಲಿಸಿದರೆ ಎಲ್ಲವೂ ಬದಲಾಗಲು ಪ್ರಾರಂಭಿಸಿದರೆ, ನೀವು ಅದನ್ನು ಕನಸಿನಂತೆ ನೋಡುತ್ತೀರಿ.

ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ದಿನ ನೀವು ಹೊರಗೆ ಹೋಗಿ ಸುಂದರವಾದ ಉದ್ಯಾನವನ್ನು ನೋಡುತ್ತೀರಿ. ಮರುದಿನ ನೀವು ಅದೇ ಜಾಗದಲ್ಲಿ ಅವಶೇಷಗಳನ್ನು ನೋಡುತ್ತೀರಿ, ಮತ್ತು 100 ವರ್ಷಗಳು ಕಳೆದಂತೆ ಅದೇ ಜಾಗದಲ್ಲಿ ಮರುಭೂಮಿ, ಮರುದಿನ ನೀವು ಎಚ್ಚರಗೊಂಡಾಗ ಅದೇ ಜಾಗದಲ್ಲಿ ಪರ್ವತವನ್ನು ನೋಡುತ್ತೀರಿ. ಇನ್ನೂ 100 ವರ್ಷಗಳು ಕಳೆದಿವೆ. ಇದನ್ನು ನೀವು ನಂಬುತ್ತೀರಾ?

ಈಗ ಎಲ್ಲವೂ ಇದೇ ಈ ರೀತಿ ಆಗುತ್ತಿದೆಯಲ್ಲ, ಆದರೆ ನಿಧಾನವಾಗಿ. ಏಕೆಂದರೆ ವಿಷಯಗಳು ನಿಧಾನವಾಗಿ ಚಲಿಸುತ್ತವೆ, ಹಾಗಾಗಿ ಅವು ನಿಜವೆಂದು ತೋರುತ್ತದೆ.

ಆಲೋಚನೆಗಳು ಮತ್ತು ಭಾವನೆಗಳ ವಿಷಯಗಳಲ್ಲೂ ಇವೇ ಸಂಭವಿಸುತ್ತವೆ. ಭಾವನೆಗಳು ತುಂಬಾ ವೇಗವಾಗಿ ಬದಲಾಗುತ್ತವೆ, ಆಲೋಚನೆಗಳು ಇನ್ನಷ್ಟು ವೇಗವಾಗಿ ಬದಲಾಗುತ್ತವೆ. ಅವು ಪುನರಾವರ್ತಿಸುವ ಕಾರಣ ನಾವು ಅವುಗಳನ್ನು ನಿಜವೆಂದು ಪರಿಗಣಿಸುತ್ತೇವೆ. ಪ್ರತಿಯೊಂದು ಅನುಭವವೂ ಹೀಗೆಯೇ. ಅನುಭವದ ಸ್ಮೃತಿ ಇದೆ ಹಾಗಾಗಿ ಅದು ನಿಜ ಅನ್ನಿಸುತ್ತದೆ. ಭ್ರಮೆಯ ಸ್ಥಿರತೆ ಇದೆ.

ಆದ್ದರಿಂದ ನೀವು ಪ್ರತಿದಿನ ಕೋಪಗೊಂಡರೆ ಅದು ನಿಜ. ಆದರೆ ನಿಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಕೋಪವನ್ನು ಅನುಭವಿಸಿದರೆ, ಅದು ಇದೆ ಎಂದು ನಿಮಗೆ ತಿಳಿದಿರುವುದಿಲ್ಲ. ಅದು ಪುನರಾವರ್ತನೆಯಾಗುತ್ತಿರುವ ಕಾರಣ ನಾವು ಅದನ್ನು ನಿಜವೆಂದು ಭಾವಿಸುತ್ತೇವೆ. ಅದು ಪುನರಾವರ್ತನೆಯಾಗುವುದನ್ನು ನಿಲ್ಲಿಸಿದರೆ ಅದು ನಿಜವಲ್ಲ. ಸ್ಮರಣೆಯು ಕೇವಲ ಪುನರಾವರ್ತನೆಯಾಗಿದೆ ಮತ್ತು ಆದ್ದರಿಂದ ನೈಜವಾಗಿ ಕಂಡುಬರುತ್ತದೆ. ಕೆಲವೊಮ್ಮೆ ಇದು ಬದುಕುಳಿಯಲು ಉಪಯುಕ್ತವಾಗಿದೆ; ಪ್ರೀತಿ ಉಪಯುಕ್ತವಾಗಿದೆ, ಕೋಪವು ಉಪಯುಕ್ತವಾಗಿದೆ ಮತ್ತು ಎಲ್ಲವೂ ಹೀಗೆಯೇ.

ಸತ್ಯದ ಮಾನದಂಡಗಳು ಅನಿಯಂತ್ರಿತ ಮತ್ತು ವ್ಯಕ್ತಿನಿಷ್ಠವಾಗಿವೆ. ಯಾರಾದರೂ ತಮ್ಮ ಸ್ವಂತ ತಿಳುವಳಿಕೆ ಮತ್ತು ಇಷ್ಟ/ಇಷ್ಟವಿಲ್ಲದ ಪ್ರಕಾರ ಯಾವುದೇ ಮಾನದಂಡವನ್ನು ಹೊಂದಿಸಬಹುದು.

20 ಜನ ಟೊಮೇಟೊ ನೋಡಿ ಎಲ್ಲರೂ ಕೆಂಪಗೆ, ದುಂಡಗೆ, ರುಚಿಯಾಗಿದೆ ಎಂದು ಹೇಳಿದರೆ ಅದು ನಿಜವಾಗುತ್ತದೆ. ಕನಸಿನಲ್ಲಿ 20 ಜನರು ಟೊಮೆಟವನ್ನು ಕಂಡರೆ ನೀವು ಎಚ್ಚರವಾದಾಗ ಅದು ನಿಜವೇ?

ಎಚ್ಚರ ಮತ್ತು ಕನಸಿನ ಸ್ಥಿತಿಯಲ್ಲಿ ಮಾನದಂಡ ಒಂದೇ ಆಗಿತ್ತು, ಆಗಲೂ ಒಂದು ಸ್ಥಿತಿಯಲ್ಲಿ ಅದು ನಿಜವಾಗಿತ್ತು, ಇನ್ನೊಂದರಲ್ಲಿ ಅದು ಇರಲಿಲ್ಲ. ವಾಸ್ತವ ಅನಿಯಂತ್ರಿತವಾಗಿದೆ.

ಸ್ಮರಣೆ ಘಟನೆಗಳು ಅಥವಾ ವಸ್ತುಗಳ ಸ್ಮರಣೆ ಇದೆ ಎಂದು ಒಬ್ಬರು ಹೇಳಬಹುದು, ಆದ್ದರಿಂದ ಅವು ಕಣ್ಮರೆಯಾಗಿದ್ದರೂ ಅಥವಾ ಗುರುತಿಸಲಾಗದಷ್ಟು ಬದಲಾಗಿದ್ದರೂ ಸಹ ಅವು ನಿಜವಾಗಿವೆ ಎಂದು ಹೇಳುತ್ತೇವೆ.( ಸ್ಮರಣೆ ಇರುವದರಿಂದ)

ನಿಮ್ಮ ನೆನಪಿನಲ್ಲಿರುವ ಟೊಮೇಟೊವನ್ನು ಈಗ ತಿನ್ನಬಹುದೇ? ಹಾಗಾದರೆ ಅದು ನಿಜವೇ?

ಅದು ನೆನಪಿನಂಗಳದಲ್ಲಿ ನೆರಳು. ನಿನ್ನ ನೆನಪಿನಂಗಳದಲ್ಲಿ ಯಾವುದೂ ನಿಜವಲ್ಲ. ನಿಮ್ಮ ಇಡೀ ಜೀವನವು ನೆರಳು. ವ್ಯಕ್ತಿಯೂ ಇಲ್ಲ, ಜೀವವೂ ಇಲ್ಲ. ಸಂಪೂರ್ಣವಾಗಿ ನಕಲಿ( ಭ್ರಮೆ). ನಾನು ಹೀಗೇ ಇದ್ದೇನೆ ಎಂದು ನೀವು ಹೇಳಬಹುದು, ಇವರ ಮಗ/ಮಗಳು, ನಾನು ತುಂಬಾ ಮಾಡಿದ್ದೇನೆ, ಈ ಮಹಾನ್ ದೇಶ, ಬಲಾಢ್ಯ ಜನಾಂಗ; ಇದು ಕೇವಲ ನೆರಳು ಮಾತ್ರ ಇದು ಎಲ್ಲಾ ಮೆಮೊರಿ ತುಂಬಿದ ಇದೆ.

ನೆನಪು ನಿಜವಲ್ಲ. ಯಾವುದೂ ನಿಜವಲ್ಲ, ಅದು ಈ ಜಗತ್ತಿನಲ್ಲಿ ಬದುಕಲು ಉಪಯುಕ್ತವಾಗಿದೆ. ಬದುಕಲಿಕ್ಕೆ ನಿಮಗೆ ಅಗತ್ಯವಿಲ್ಲದಿದ್ದರೆ, ಅದನ್ನು ಬಿಡಬಹುದು. "ನೀವು" ಬದುಕುವ ಅಗತ್ಯವಿಲ್ಲ, ದೇಹವು ಬದುಕಬೇಕು. ಆದರೆ ದೇಹ ನಾನಲ್ಲ.

"ನಿನಗೆ" ಸ್ಮೃತಿಯೇ ಬೇಕಾಗಿಲ್ಲ, ಜಗತ್ತು ಬೇಕಾಗಿಲ್ಲ, ದೇಹಕ್ಕೆ ಜಗತ್ತು ಬೇಕು. ನೀವು ದೇಹವನ್ನು ಬಿಟ್ಟಿರಲು ಸಾಧ್ಯವಾಗದ ಕಾರಣ ಅದನ್ನು ( ದೇಹವನ್ನು) ಪೋಷಿಸಿಕೊಳ್ಳಬೇಕಾಗುತ್ತದೆ. ( ದೇಹವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ).

ನಾವು ಭ್ರಮೆಯಲ್ಲಿ ಬದುಕುತ್ತೇವೆ,ನಮ್ಮ ಅಜ್ಞಾನದ ಕಾರಣದಿಂದ ನಾವು ಅದನ್ನೇ ಸತ್ಯವೆಂದು ನಂಬುತ್ತವೆ. ನಾವು ಅರಿವಿನಲ್ಲಿದ್ದಾಗ ಸತ್ಯದೊಂದಿಗೆ ಬದುಕುತ್ತೇವೆ, ಇದು ಜ್ಞಾನ. ಸತ್ಯ ಮತ್ತು ಅಸತ್ಯಗಳ ಅರಿವಿನಲ್ಲಿ ನಾವು ಬದುಕುತ್ತೇವೆ.

ಇದು ಮಾಯೆಯ ಜ್ಞಾನ, ಮಾಯೆಯ ಜ್ಞಾನ.

ನಿನ್ನನ್ನು ಬಿಟ್ಟು ಎಲ್ಲವೂ ಭ್ರಮೆ.


ದಿನ 3: ಏಕತೆಯ ಜ್ಞಾನ

ಅನ್ನವೇಷಣೆ--

ಹೇಗೆ ಎಲ್ಲವೂ ಒಂದು ? ಹೇಗೆ ಎರಡು ಅಲ್ಲ ? ಏಕೆ ಅಸ್ತಿತ್ವವು ದ್ವಂದ್ವವಲ್ಲ?

ಅಸ್ತಿತ್ವ:--

ನಾವು ಮೊದಲು ಅಸ್ತಿತ್ವವನ್ನು ವ್ಯಾಖ್ಯಾನಿಸೋಣ. ಇರುವುದೆಲ್ಲ ಅಸ್ತಿತ್ವವಷ್ಟೇ. ಅದನ್ನು ಬಿಟ್ಟು ಏನೂ ಇಲ್ಲ. ನೀವು ಎಲ್ಲಿಗೆ ಹೋದರೂ ಮತ್ತು ನೀವು ಏನು ನೋಡಿದರೂ ಅಲ್ಲಿ ಒಂದು ಅನುಭವವಿದೆ ಮತ್ತು ಅನುಭವಿ ಇದ್ದಾನೆ. ಅವರು ಯಾವಾಗಲೂ ಒಟ್ಟಿಗೆ ಇರುತ್ತಾರೆ. ಅವು ಮೂಲಭೂತ ಮತ್ತು ಇವೆರಡೂ ಅಸ್ತಿತ್ವವೇ. ಅವು ಒಂದೇ ಎಂದು ನಾವು ಪರಿಗಣಿಸುತ್ತೇವೆ. ಮತ್ತು ನಾವು ಅವುಗಳನ್ನು ಅಸ್ತಿತ್ವ ಎಂದು ಕರೆಯುತ್ತೇವೆ.

ಅನುಭವ ಮತ್ತು ಅನುಭವಿಯನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ನೀವು ನೋಡಿದ್ದೀರಾ? ಅಸ್ತಿತ್ವದಲ್ಲಿ ಏನಾದರೂ ಇದೆ ಎಂದು ಹೇಳಿದ ತಕ್ಷಣ ಅದು ನಿಮ್ಮ ಅನುಭವಕ್ಕೆ ಬರುತ್ತದೆ. ನೀವು ಅದಕ್ಕೆ ಸಾಕ್ಷಿ ಆಗಲೇ ಬೇಕಾಗುತ್ತದೆ. ಮತ್ತು ಸಾಕ್ಷ್ಯವು ಯಾವಾಗಲೂ ಅನುಭವದ್ದಾಗಿರುತ್ತದೆ. ನೀವು ಯವುದನ್ನು ಅನುಭವಿಸಲು ಸಾಧ್ಯವಿಲ್ಲವೋ ಅದು ಅನುಭವಿ ಆಗಿರುತ್ತದೆ. ಇದು ಯಾವಾಗಲೂ ಹೀಗೆಯೇ ಇರುತ್ತದೆ. ಆದ್ದರಿಂದ ಮೂಲಭೂತವಾಗಿ ಅನುಭವವು ಭ್ರಮೆಯಾಗಿದೆ ಮತ್ತು ಅನುಭವಿ ಸತ್ಯ ಅಥವಾ ಸಾರವಾಗಿದೆ.

ಆದ್ದರಿಂದ ಅಸ್ತಿತ್ವವು ಅನುಭವ ಮತ್ತು ಅನುಭವಿ ಆಗಿದ್ದರೆ, ಅಸ್ತಿತ್ವದ ಸಾರ ಏನು? ನಿಜವಾಗಿ ಅಸ್ತಿತ್ವ ಎಂದರೇನು? ಅದು ಅನುಭವ ಮತ್ತು ಅನುಭವಿ. ಮತ್ತು ಅನುಭವಿ ನಿಸ್ಸಂಶಯವಾಗಿ ನಾನು. ಆದ್ದರಿಂದ ಅಸ್ತಿತ್ವದ ಸಾರವು ನಾನು.

ನಾನು ಸಂಪೂರ್ಣ ಅಸ್ತಿತ್ವ.

ಯಾವುದೇ ಅನುಮಾನವಿದೆಯೇ?

ಯಾವಾಗಲೂ ಜೊತೆಯಾಗಿಯೇ ಇರುವುದಕ್ಕೆ ಉದಾಹರಣೆಗಳನ್ನು ನೋಡೋಣ ಮತ್ತು ಹೆಚ್ಚಿನ ಪುರಾವೆಗಳನ್ನು ಅನ್ವೇಷಿಸೋಣ.

ಅನುಭವಿ ಇಲ್ಲದೆ ಆಗುತ್ತಿರುವ ಅನುಭವವನ್ನು ನೀವು ನೋಡಿದ್ದೀರಾ?

ಅನುಭವವಿಲ್ಲದ ಅನುಭವಿ ಇದ್ದಾನಾ?

ಅನುಭವ,ಅನುಭವಿ ಯಾವಾಗಲೂ ಜೊತೆಯಲ್ಲಿರುತ್ತಾರೆ. ಏಕೆಂದರೆ ಏನಾದರೂ ಯಾವಾಗಲೂ ಒಟ್ಟಿಗೆ ಇದ್ದರೆ, ನಾವು ಅವುಗಳನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಹಾಗಾಗಿ ನಾವು ಅವು ಒಂದು ಎಂದು ಹೇಳುತ್ತೇವೆ. ಮಣ್ಣಿಲ್ಲದೆ ಮಡಕೆ ಇಲ್ಲ, ಚಿನ್ನವಿಲ್ಲದೆ ಆಭರಣ ಇಲ್ಲ, ನೀರಿಲ್ಲದೆ ಅಲೆ ಇಲ್ಲ. ಚಿನ್ನದಲ್ಲಿ ಬದಲಾಗುವ ಅಂಶವು ಆಭರಣವಾಗಿದೆ, ಮಣ್ಣಿನಲ್ಲಿ ಬದಲಾಗುವುದು ಪಾತ್ರೆಯಾಗಿದೆ, ನೀರಿನಲ್ಲಿ ಬದಲಾಗುವ ಅಂಶವು ಅಲೆಯಾಗಿದೆ. ಅನುಭವ ಮತ್ತು ಅನುಭವಿಯಲ್ಲಿ ಬದಲಾಗುವುದು ಅನುಭವ, ಮತ್ತು ಬದಲಾಗದೇ ಇರುವುದು ಅನುಭವಿ, ಮತ್ತು ಅವು ಎರಡೂ ಒಂದೇ. ಹಾಗಾಗಿ ಎಲ್ಲವೂ ನನ್ನದೇ ರೂಪವಾಗಿದೆ. ಅದಕ್ಕೇ ನಾನು ಇಲ್ಲದೇ ಯಾವ ರೂಪವೂ ಕಾಣುವುದಿಲ್ಲ. ಮನಸ್ಸು ಅನುಭವಗಳು ಮತ್ತು ಅನುಭವಿಯನ್ನು ವಿಭಜಿಸುತ್ತದೆ. ಆದರೆ ಮನಸ್ಸೇ ಒಂದು ಅನುಭವ, ಆದ್ದರಿಂದ ಇದು ಭ್ರಮೆ ಮತ್ತು ಭ್ರಮೆಯೇ ಅವು ಎರಡು ಎಂದು ಹೇಳುತ್ತಿದೆ.

ಪ್ರತ್ಯೇಕತೆ:--

‘ಎರಡು'ಇವೆ ಎನ್ನುವುದಕ್ಕೆ ಪುರಾವೆಗಳನ್ನು ಹುಡುಕೋಣ. ಆದ್ದರಿಂದ ನಾವು ನೇರ ಅನುಭವಕ್ಕೆ ಬರುತ್ತೇವೆ.

ನೀಡಿರುವ ಅನುಕ್ರಮದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ.

ನೀನು ಎಲ್ಲಿದಿಯಾ?

ನಿಮ್ಮ ಮುಂದೆ ಏನಿದೆ?

ವಸ್ತುವು ಅನುಭವಿಯಿಂದ ಎಷ್ಟು ದೂರದಲ್ಲಿದೆ?

ಅಳತೆ ಪಟ್ಟಿ ಅಥವಾ ಯಾವುದೇ ಅಳೆಯುವ ಸಾಧನ ಬಳಸಿ ಅಳೆಯಲು ಪ್ರಯತ್ನಿಸಿ. ಅಂತರವು ದೇಹದಿಂದ ಅಲ್ಲ, ಆದರೆ ಅನುಭವಿ ಎಲ್ಲಿದ್ದನೋ ಅಲ್ಲಿಂದ. ವಸ್ತು ಹೊರಗಿದೆ ಎಂದು ಮನಸ್ಸು ಹೇಳುತ್ತದೆ. ಮನಸ್ಸು ದೇಹವನ್ನು ನಾನು ಎಂದು ಕರೆಯುತ್ತಿದೆ, ಅದು ಯಾವಾಗಲೂ ಹಾಗೆ ಮಾಡುತ್ತದೆ. ಅದು ನಾನಲ್ಲ ಎಂದು ಎಂದಿಗೂ ಹೇಳುವುದಿಲ್ಲ.

ಎಲ್ಲೆಲ್ಲಿ ಅನುಭಾವಿ ಇದ್ದಾನೋ ಅಲ್ಲಿ ಅನುಭವ ಇದ್ದೇ ಇರುತ್ತದೆ. ಅವು ಯಾವಾಗಲೂ ಇಲ್ಲೇ ಮತ್ತು ಈಗಲೇ ಇರುತ್ತವೆ. ಉಳಿದದ್ದೆಲ್ಲ ಮನಸ್ಸಿನ ಕಲ್ಪನೆಯಾಗಿದೆ( ಆಟವಾಗಿದೆ). ವಸ್ತುವು ನೀವು ಎಲ್ಲಿರಿವಿರೋ ಅಲ್ಲಿ ಇದ್ದರೆ, ಇಡೀ ಪ್ರಪಂಚವು ಸಹ ನೀವು ಇರುವಲ್ಲಿಯೇ ಇರುತ್ತದೆ. ಭ್ರಮೆಯು ಇಂದ್ರಿಯಗಳಿಂದ ಉತ್ಪತ್ತಿಯಾಗುತ್ತಿದೆ, ಅಲ್ಲಿ ಏನೂ ಇಲ್ಲ. ಇಂದ್ರಿಯಗಳು ಏನು ಹೇಳುತ್ತಿವೆಯೋ ಅದು ಮಾನಸಿಕವಾಗಿದೆ. ನಾನು ನಿನ್ನ ಅನುಭವವನ್ನು ನೋಡಲಾರೆ, ನನ್ನ ಅನುಭವವನ್ನು ನೀನು ನೋಡಲಾರೆ. ಹಾಗಾಗಿ ಎಲ್ಲವೂ ನನ್ನೊಳಗಿದೆ, (ಅದು ಕಾವ್ಯ ಎಂದು ಹೇಳುತ್ತೇವೆ). ಯಾವುದೂ ನನ್ನಿಂದ ಪ್ರತ್ಯೇಕವಾಗಿಲ್ಲ. ಏಲ್ಲವೂ ನನ್ನಲ್ಲಿದೆ. ನಾನೇ ಅಸ್ತಿತ್ವ ಮತ್ತು ಎಲ್ಲವೂ ನನ್ನಲ್ಲಿದೆ. ಇದು ನೇರ ಅವಲೋಕನ.

ಇನ್ನೂ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.

ಅನುಭವವು ಮೊದಲು ಸಂಭವಿಸುತ್ತದೆ ಮತ್ತು ಅನುಭವಿ ನಂತರ ಬರುತ್ತದೆಯೇ?

ಅನುಭವಿಸುವವರು(ಅನುಭವಿ) ಮೊದಲು ಬರುತ್ತಾರೆಯೇ ಮತ್ತು ನಂತರ ಅನುಭವವು ಸಂಭವಿಸುತ್ತದೆಯೇ?

ಅವರು ದೇಶ ಮತ್ತು ಕಾಲದಲ್ಲಿ ಒಟ್ಟಿಗೆ ಇರುತ್ತಾರೆ. ಯಾವುದೇ ಪ್ರತ್ಯೇಕತೆ ಇರಲು ಸಾಧ್ಯವಿಲ್ಲ. ಈ ಎರಡು ಪರಿಕಲ್ಪನೆಗಳಿಂದ ಮಾತ್ರ ಪ್ರಕೃತಿಯಲ್ಲಿ ಬೇರ್ಪಡುವಂತೆ ತೋರುತ್ತದೆ ಆದರೆ ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅನುಭವಗಳು ಬದಲಾಗುತ್ತಿವೆ, ಅವು ವಿಭಿನ್ನವಾಗಿವೆ, ಆದರೆ ಪ್ರತ್ಯೇಕವಾಗಿಲ್ಲ. ಅಲೆಗಳು ಬದಲಾಗುತ್ತಿವೆ ಆದರೆ ಅವು ನೀರಿನಿಂದ ಪ್ರತ್ಯೇಕವಾಗಿದವೆಯೇ? ಮಣ್ಣು ಆಕಾರವನ್ನು ಬದಲಾಯಿಸುತ್ತದೆ ಆದರೆ ಮಡಕೆ ಮತ್ತು ಮಣ್ಣಿನ ನಡುವೆ ಪ್ರತ್ಯೇಕತೆ ಇದೆಯೇ? ಮನಸ್ಸು ವಿಭಜಿಸಿ ನೋಡುತ್ತದೆ ಮತ್ತು ಅದು ಎರಡು ಇವೆ ಎಂದು ಹೇಳುತ್ತದೆ.

ಗಡಿ(ರೇಖೆ)

ಎಲ್ಲವೂ ಎಲ್ಲಿದೆ ಎಂಬುದನ್ನು ಕಂಡುಹಿಡಿಯಲು ಇನ್ನೂ ಒಂದು ಮಾರ್ಗವಿದೆ.

ವಸ್ತು ಮತ್ತು ನನ್ನ( ಅನುಭವಿ) ನಡುವಿನ ಗಡಿ(ರೇಖೆ) ಎಲ್ಲಿದೆ?

ಅದು ಹೊರಗಿದ್ದರೆ, ಅನುಭವಿ ಪ್ರಾರಂಭವಾಗುವ ಗಡಿ ಎಲ್ಲಿದೆ ಮತ್ತು ಅನುಭವ ಎಲ್ಲಿಗೆ ಕೊನೆಗೊಳ್ಳುತ್ತದೆ. ಅನುಭವಿ ಎಲ್ಲಿ ಕೊನೆಗೊಳ್ಳುತ್ತಾನೆ ಮತ್ತು ಅನುಭವವು ಪ್ರಾರಂಭವಾಗುತ್ತದೆ? ಕಲಿಕೆಯಿಂದ( ಬೋಧನೆಯಿಂದ) ನಾವು ವಸ್ತುಗಳನ್ನು ದೇಹದ ಹೊರಗೆ ಇವೆ ಎಂದು ನೋಡುತ್ತೇವೆ, ಆದರೆ ದೇಹ ಎಲ್ಲಿದೆ? ಮನಸ್ಸಿನ ಹೊರಗೆ ಎಂದು ಹೇಳುತ್ತಾರೆ. ಆದರೆ ಮನಸ್ಸು ಎಲ್ಲಿದೆ? ಇದು ನನ್ನ ಹೊರಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ನಾನಲ್ಲ. ಮನಸ್ಸು ಮತ್ತು ನನ್ನ(ಅನುಭವಿ) ನಡುವಿನ ಗಡಿ ಎಲ್ಲಿದೆ? ವಸ್ತುವು ಹೊರಗಿದೆ ಎಂದು ನೀವು ಹೇಳಬಹುದು, ಆಲೋಚನೆಗಳ ಬಗ್ಗೆ ನೀವು ಏನು ಹೇಳುತ್ತಿರಾ?

ವಾಸ್ತವವಾಗಿ ಯಾವುದೇ ಗಡಿ ಇಲ್ಲ. ಅಜ್ಞಾನವು ಭ್ರಮೆಯನ್ನು ಸೃಷ್ಟಿಸುತ್ತದೆ. ಅನುಭವ ಮತ್ತು ಅನುಭವಿ ಒಂದು, ಒಂದರ( ಅಸ್ತಿತ್ವ) ಎರಡು ಅಂಶಗಳು, ಮತ್ತು ಅದು ನಾನು ಸಂಪೂರ್ಣ ಅಸ್ತಿತ್ವ.

ಇತರ ಜನರು ಅಂದರೆ ಯಾರು? ಅವರೂ ಅದನ್ನೇ ಹೇಳುವರು. ಆದ್ದರಿಂದ ಅನೇಕ ಅನುಭವಿಗಳು ಮತ್ತು ಅನೇಕ ಅಸ್ತಿತ್ವಗಳು ಇರಬೇಕೇ? ಅದು ಸಾಧ್ಯವಿಲ್ಲ. ಅನಂತ ಅನುಭವಗಳ ಮೂಲಕ ಅನುಭವಿಸುತ್ತಿರುವ ಒಬ್ಬ ಅನುಭವಿ ಮಾತ್ರ ಇದ್ದಾನೆ. ಅನುಭವಿ ಯಾವುದರಿಂದ ಮಾಡಲ್ಪಟ್ಟಿದ್ದಾನೆ? ಯಾವುದರಿಂದಲೂ ಇಲ್ಲ, ಶೂನ್ಯತೆ ಅಷ್ಟೇ. ಅಸ್ತಿತ್ವವು ಯಾವುದರಿಂದ ಮಾಡಲ್ಪಟ್ಟಿದೆ? ಶೂನ್ಯತೆಇಂದ. ಇದು ಬಹುತೇಕ ಯಾವುದರಿಂದಲೂ ಅಲ್ಲ ಆದರೆ ನಾವು ಯಾವಾಗಲೂ ಅನುಭವ ಮತ್ತು ಅನುಭವಿಗಳನ್ನು ನೋಡುತ್ತೇವೆ. ಅಸ್ತಿತ್ವವು ಶೂನ್ಯವಾಗಿದೆ, ಅದು ಅನೇಕ ರೂಪಗಳಲ್ಲಿ ಸ್ವತಃ ತನಗೆ ತಾನೇ ಸಾಕ್ಷಿಯಾಗಿದೆ. ಇದು ಏಕತ್ವ, ಅದ್ವೈತದ ಜ್ಞಾನ.

ಅದ್ವೈತ:-

ನಾವು ಏಕತೆಯನ್ನು ಹೇಗೆ ಅನುಭವಿಸಬಹುದು?

ಏಕತೆ ಒಂದು ಅನುಭವವಲ್ಲ. ಅನುಭವವಾದ ತಕ್ಷಣ ಅಲ್ಲಿ ಅನುಭವಿ ಇರುತ್ತಾನೆ. ಇದು ಕೇವಲ ಇರುವಿಕೆ. ಇರುವುದು(ಇದ್ದು ಬಿಡುವುದು)- ಏಕತೆ. ನೀವು ಈಗಾಗಲೇ ಅದೇ ಆಗಿ ಇದ್ದೀರಾ. ಮನಸ್ಸು ಅದನ್ನು ವಿಭಜಿಸುತ್ತದೆ ಆದರೆ ಯಾವುದೇ ವಿಭಜನೆಯಿಲ್ಲ ಎಂದು ನೋಡಲು ನೀವು ಮನಸ್ಸನ್ನೇ ಬಳಸಬಹುದು. ವಿಭಜಿಸುವುದು ಮನಸ್ಸಿನ ಸ್ವಭಾವವಾಗಿದೆ ಆದರೆ ಬುದ್ಧಿ ಉಪಯೋಗಿಸಿ ಇವು ಎರಡಲ್ಲ ಎಂದು ಹೇಳಬಹುದು. ಅದಕ್ಕಾಗಿಯೇ ನಾವು ಎರಡು ಎನ್ನುವುದು ಇಲ್ಲ ಎಂದು ಹೇಳುತ್ತೇವೆ. ಅದಕ್ಕೆ ನಾವು ಅದ್ವೈತ ಎನ್ನುತ್ತೇವೆ. ಆದ್ದರಿಂದ ನಾವು ಅದನ್ನು ಅನುಭವಿಸುತ್ತಿದ್ದೇವೆ ಎಂದು ಹೇಳುತ್ತೇವೆ. ಅನುಭವಿಸುವುದು ಮಾತ್ರ. ನೀವು ಈಗ ಅನುಭವದ ಸ್ಥಿತಿಯಲ್ಲೇ ಇದ್ದೀರಾ. ಇದು ದ್ವಂದ್ವವಲ್ಲದ ಸ್ಥಿತಿಯಾಗಿದೆ. ಇದು ಸಾಧ್ಯವಿರುವ ಏಕೈಕ ಸ್ಥಿತಿಯಾಗಿದೆ, ಇದು ಅಸ್ತಿತ್ವದ ಸ್ಥಿತಿ.

ನಿರ್ಲಿಪ್ತತೆಯಿಂದ ಈ ಅನುಭವದಲ್ಲಿರಲು ಸಾಧ್ಯ. ಸರಳವಾಗಿ ಕುಳಿತು ಬಹಳ ನಿರ್ಲಿಪ್ತ ರೀತಿಯಲ್ಲಿ ಗಮನಿಸಿ ಮತ್ತು ನಿಮ್ಮ ಗಮನವನ್ನು ದೇಹ, ಆಲೋಚನೆಗಳು, ಆಸೆಗಳು ಮತ್ತು ನಾನು ಎಂಬ ಭಾವದ ಮೇಲೆ ಹರಡಿ ಹಾಗೂ ಎಲ್ಲವನ್ನೂ ನಿಮ್ಮ ಗಮನಕ್ಕೆ ತಂದುಕೊಳ್ಳಿ ಮತ್ತು ನೀವು ಅನುಭವಿಸುವುದನ್ನು ಮಾತ್ರ ಗಮನಿಸುತ್ತೀರಿ. ಇದು ಸಮಾಧಿ ಸ್ಥಿತಿ. ನಾವು ಯಾವಾಗಲೂ ಸಮಾಧಿಯಲ್ಲಿದ್ದೇವೆ ಆದರೆ ಮಾನಸಿಕ ಚಟುವಟಿಕೆಯು ಅದನ್ನು ಮರೆಮಾಡುತ್ತದೆ. ಎಲ್ಲವನ್ನೂ ಎಚ್ಚರದ ಸ್ಥಿತಿಯ ಹಿಂದೆ ಎಸೆಯಲಾಗುತ್ತದೆ( ಮರೆ ಮಾಡಲಾಗುತ್ತದೆ) ಆದರೆ ನಾವು ಗಮನ ಹರಿಸಿದರೆ ಅದು ಖಾಲಿಯಾಗಿದೆ ಎಂದು ನಾವು ಕಂಡುಕೊಳ್ಳುತ್ತೇವೆ. ನಾನು, ನನ್ನದು ಎನ್ನುವುದು ಇಲ್ಲ. ಅದು ಖಾಲಿಯಾಗಿರುವುದು, ಒಂದಾಗಿರುವುದು, ಸಂಪೂರ್ಣ ಅಸ್ತಿತ್ವ. ಅಸ್ತಿತ್ವದ ಮುಂದೆ ಎಲ್ಲವೂ ಕನಸಿನಂತೆ ಗೋಚರಿಸುತ್ತಿದೆ. ನೀವು ಸಮಾಧಿಯಲ್ಲಿ ಇರಬೇಕಂದರೆ ಅದು ಇಲ್ಲಿಯೇ, ಈಗಲೇ ಇದೆ.

ನಿಮ್ಮದು ಅದ್ವೈತದ ಅಸ್ತಿತ್ವ, ಎಲ್ಲವನ್ನೂ ಸ್ವತಃ ಒಂದು ಭ್ರಮೆಯ ಕನಸಿನಂತೆ ಅನುಭವಿಸುತ್ತಿದ್ದೀರಿ.

ಅನ್ವೇಷಣೆಯ ಅಂತ್ಯ, ಆಧ್ಯಾತ್ಮಿಕತೆಯ ಅಂತ್ಯ, ಜ್ಞಾನದ ಅಂತ್ಯ.